ದೇಗುಲ ತೆರವು: ಸಾರ್ವಜನಿಕರು, ಪಾಲಿಕೆ ಅಧಿಕಾರಿಗಳ ಮಾತಿನ ಚಕಮಕಿ

ದಾವಣಗೆರೆ: ನಗರದ ಎಸ್.ಎಂ.ಕೃಷ್ಣ ಬಡಾವಣೆಲ್ಲಿರುವ ಯಲ್ಲಮ್ಮನ ದೇಗುಲ ತೆರವು ವಿಚಾರವಾಗಿ ಸಾರ್ವಜನಿರು ಮತ್ತು ಮಾಹಾ ನಗರ ಪಾಲಿಕೆ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿದೆ.

2012 ರಲ್ಲಿ ಮಹಾನಗರ ಪಾಲಿಕೆಯ ನಿವೇಶನದಲ್ಲಿ ಯಲ್ಲಮ್ಮನ ದೇಗುಲ‌ ನಿರ್ಮಾಣ ಮಾಡಲಾಗಿತ್ತು. ದೇವಾಲಯ ನಿರ್ಮಾಣ ಅನಧಿಕೃತವಾಗಿದೆ ಎಂದು ಕಾರಣ ಹೇಳಿ ಪಾಲಿಕೆ ಅಧಿಕಾರಿಗಳು ದೇಗುಲ ತೆರವಿಗೆ ಮುಂದಾಗಿದ್ದಾರೆ. ಪರಿಣಾಮ ಎಸ್.ಎಂ.ಕೃಷ್ಣ ಬಡಾವಣೆಯ ನಿವಾಸಿಗಳು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ವಿರೋಧಕ್ಕೆ ಮಣಿದ ಪಾಲಿಕೆ ಅಧಿಕಾರಿಗಳು ನ್ಯಾಯಾಲಯದ ಕದ ತಟ್ಟಲು ಮುಂದಾಗಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv