ಟೆಲಿಮಾರ್ಕೆಟಿಂಗ್ ವರಸೆ: ₹1600ಗೆ ಮೊಬೈಲ್ ಅಲ್ಲ, ಸ್ವೀಟ್ ಪ್ಯಾಕೆಟ್​​ ಬರುತ್ತೆ..!

ಯಾದಗಿರಿ: ಬೆಂಗಳೂರಿನಲ್ಲಿನ ರಾಯಲ್ ಟೆಲಿಮಾರ್ಕೆಟಿಂಗ್ ಕಂಪನಿಯಿಂದ ಕಾಲ್ ಮಾಡಿ ಗ್ರಾಹಕನಿಗೆ ಪಂಗನಾಮ ಹಾಕಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಜಿಲ್ಲೆಯ ಶಹಾಪೂರ ತಾಲೂಕಿನ ಚೆಂದಾಪೂರ ಗ್ರಾಮದ ಸುಭಾಷ್ ಎನ್ನುವ ಗ್ರಾಹಕನಿಗೆ ಕಂಪನಿಯಿಂದ 12,500 ರೂಪಾಯಿಯ ಸ್ಯಾಮ್ ಸಂಗ್ ಮೊಬೈಲ್, ಕೇವಲ 1600 ರೂಪಾಯಿಗೆ ಮಾರುತ್ತಿದ್ದೇವೆ, ಆಫರ್ ಇದೆ.+91 7619658098 ನಂಬರ್​ಗೆ ಕಾಲ್​ ಮಾಡಿ ಆಫರ್ ತಗೊಳ್ಳಿ ಎಂದು ರಾಯಲ್ ಟೆಲಿಮಾರ್ಕೆಟಿಂಗ್ ಕಂಪನಿ ಸಿಬ್ಬಂದಿ ಕಾಲ್ ಮಾಡಿ, ತಮ್ಮ ವಿಳಾಸ ವಿವರಗಳನ್ನ ನಿಡಿದ್ದರು.

ಇದನ್ನ ನಂಬಿದ ಸುಭಾಷ್, “ROYAL TELEMARKETING” NO=13, SAPTHAGIRI LAYOUT, THINDLU, BANGALORE- 560097 ಅನ್ನೋ ವಿಳಾಸದಲ್ಲಿರುವ ಕಂಪನಿಗೆ ಹಣ ಪಾವತಿಸಿದ್ದಾರೆ. ನಂತರ ಅವರು ಪೋಸ್ಟ್​ ಆಫೀಸಿನಲ್ಲಿ ಪಾರ್ಸಲ್ ಬಂದಾಗ, ತೆಗೆದು ನೋಡಿದ್ರೆ ಅವರಿಗೆ ​ನಕಲಿ ಗೋಲ್ಡ್ ಸೋನ್ ಪಾಪಡ್​ ಸ್ವೀಟ್ ಬಂದಿತ್ತು. ಮೋಸ ಹೋದ ಸುಭಾಷ್ ನ್ಯಾಯಕ್ಕಾಗಿ ಗ್ರಾಹಕರ ಕೋರ್ಟ್​ ಮೆಟ್ಟಿಲು ಹತ್ತಲು ನಿರ್ಧರಿಸಿದ್ದಾರೆ. ಇನ್ನು ಇದೇ ತರಹದ  ಪೋಸ್ಟ್​ ಆಫೀಸ್ಸಿನಲ್ಲಿ, ಪಾರ್ಸಲ್ ಬಂದಿವೆ. ಅವು ಕೂಡಾ ನಕಲಿ ಇರಬಹುದೆಂಬ ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.


Follow us on:

YouTube: firstNewsKannada  Instagram: firstnews_tv  Face Book: firstnews.tv  Twitter: firstnews_tv