ಹುಡುಗಿಯರ ಚಟಕ್ಕೆ ಬಿದ್ದ ಪತಿರಾಯ ಮಾಡಿದ್ದೇನು?

ಬೆಂಗಳೂರು: ತನ್ನ ಗಂಡ ಹುಡುಗಿಯರ ಚಟಕ್ಕೆ ಬಿದ್ದು ತನ್ನನ್ನು ಮತ್ತು ತನ್ನ ಮಗಳನ್ನ ಬೀದಿಪಾಲು ಮಾಡಿರೋದಾಗಿ ಆರೋಪಿಸಿ ಪತ್ನಿಯೊಬ್ಬಳು ಪತಿ ವಿರುದ್ಧ ಕಂಪ್ಲೇಂಟ್ ಕೊಟ್ಟಿರುವ ಕೇಸೊಂದು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಬಾಗಲುಗುಂಟೆ ಪೊಲೀಸ್ ಠಾಣೆಯಲ್ಲಿ ಉಮಾ ಅನ್ನೋ ಮಹಿಳೆ ತನ್ನ ಪತಿ ರಮೇಶ್ ಕೇಸ್ ದಾಖಲಿಸಿದ್ದು, ಹುಡುಗಿಯರ ಚಟಕ್ಕೆ ಬಿದ್ದ ತನ್ನ ಪತಿ ತನ್ನನ್ನೂ ಮತ್ತು ಮಗಳನ್ನೂ ಮನೆಯಿಂದ ಹೊರ ಹಾಕಿರೋದಾಗಿ ದೂರಿನಲ್ಲಿ ಆರೋಪಿಸಲಾಗಿದೆ.
ಮಹಿಳೆ ನೀಡಿರುವ ಕಂಪ್ಲೇಂಟ್‌ನಲ್ಲಿ ಉಲ್ಲೇಖಿಸಿರುವಂತೆ, 13 ವರ್ಷಗಳ ಹಿಂದೆ ಉಮಾ ಎಂಬಾಕೆಯನ್ನ ರಮೇಶ್ ವಿವಾಹವಾಗಿದ್ದರು. ಐಬಿಎಂ ಕಂಪನಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ರಮೇಶ್‌ಗೆ ಮೊದಲಿನಿಂದಲೂ ಹುಡುಗಿಯರ ಚಟ ಇತ್ತು. ಕಳೆದ 4 ತಿಂಗಳ ಹಿಂದೆ ಪತ್ನಿ, ಮಗಳನ್ನ ಮನೆಯಿಂದ ಆಚೆ ಕಳುಹಿಸಿದ್ದ. ಇತ್ತ ಉಮಾ ತನ್ನ ಮಗಳನ್ನ ಕರೆದುಕೊಂಡು ತನ್ನ ತಂದೆ ಮನೆಯಲ್ಲಿ ವಾಸವಿದ್ಲು. ಈ ವೇಳೆ ರಮೇಶ್ ಹುಡುಗಿಯರ ಜೊತೆ ಮಲೇಷಿಯಾ,ಗೋವಾ ಅಂತೆಲ್ಲಾ ಟ್ರಿಪ್ ಮಾಡಿದ್ದಾಗಿ ಉಮಾ ಆರೋಪಿಸಿದ್ದಾಳೆ.
ಇತ್ತೀಚೆಗೆ ಕಾವ್ಯಾ ಎಂಬಾಕೆಯ ಜೊತೆ ರಮೇಶ್ ಸುತ್ತಾಡ್ತಿದ್ದ. ಇದೇ ವೇಳೆ ನಾಲ್ಕು ದಿನಗಳ ಹಿಂದೆ ಪತ್ನಿ ರಮೇಶ್ ಮನೆಗೆ ಹೋಗಿದ್ದಾಗ ಬಿಗ್ ಶಾಕ್ ಕಾದಿತ್ತು. ಅದಾಗ್ಲೇ ಕಾವ್ಯಾ 9 ತಿಂಗಳ ಗರ್ಭಿಣೆಯಾಗಿದ್ದು, ಸೀಮಂತ ಕಾರ್ಯ ನಡೆಯುತ್ತಿತ್ತು. ಇದನ್ನ ಪ್ರಶ್ನಿಸಿದ್ದಕ್ಕೆ ಮಗಳು ಹಾಗೂ ಪತ್ನಿಯ ಮೇಲೆ ಪತಿ ಮಾರಾಣಾಂತಿಕ ಹಲ್ಲೆ ನಡೆಸಿದ್ದಾಗಿಯೂ ಕಂಪ್ಲೇಂಟ್‌ನಲ್ಲಿ ಹೇಳಲಾಗಿದೆ.
ಇಷ್ಟಕ್ಕೂ ಬಿಡದ ಪತಿ ಪ್ಲಾಟ್ ಖರೀದಿಸುವ ನೆಪದಲ್ಲಿ ಉಮಾ ಒಡವೆಗಳನ್ನ ಮಾರಾಟ ಮಾಡಿದ್ದಾನಂತೆ. ಈವರೆಗೂ ಪೊಲೀಸರು ಆರೋಪಿಯ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಆರು ವರ್ಷದ ಮಗಳು ನನಗೆ ಅಪ್ಪ ಬೇಕು ಅಂತ ಹಠ ಹಿಡಿದಿದ್ದು, ನನಗೆ ನ್ಯಾಯ ಕೊಡಿಸಿ ಅಂತ ಉಮಾ ಪೊಲೀಸರ ಮೊರೆ ಹೋಗಿದ್ದಾರೆ.

Leave a Reply

Your email address will not be published. Required fields are marked *