‘ನನ್ನ ಬೆಳವಣಿಗೆ ನೋಡಿ ಹೆಚ್ಚು ಖುಷಿ ಪಟ್ಟವರು ಸೋಮಣ್ಣ, ನನಗೆ ಯಾವುದೇ ಪಾಠ ಮಾಡಿಲ್ಲ’

ಬೆಂಗಳೂರು: ನನ್ನ ಮತ್ತು ಶಾಸಕ ವಿ. ಸೋಮಣ್ಣರ ಮಧ್ಯೆ ಯಾವುದೇ ರೀತಿಯ ಚರ್ಚೆ ನಡೆದಿಲ್ಲ ಎಂದು ಬೆಂ. ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಸ್ಪಷ್ಟಪಡಿಸಿದ್ದಾರೆ. ಮತದಾನ ಬಳಿಕ ಉಪಹಾರಕ್ಕೆಂದು ತೇಜಸ್ವಿ ಸೂರ್ಯರನ್ನು ಮನೆಗೆ ಆಹ್ವಾನಿಸಿದ್ದ ಸೋಮಣ್ಣ, ಲೋಕಸಭೆಗೆ ಪ್ರವೇಶಿಸಲು ಬೇಕಾಗಿರುವ ಅರ್ಹತೆ, ಸಾರ್ವಜನಿಕ ಬದುಕು ಸೇರಿದಂತೆ, ಸಮಾಜದಲ್ಲಿ ಹೇಗಿರಬೇಕು ಎಂಬುದರ ಬಗ್ಗೆ ಪಾಠ ಮಾಡಿದ್ರು ಎಂದು ಹೇಳಲಾಗುತ್ತಿತ್ತು.

ಈ ಕುರಿತಂತೆ ಪ್ರತಿಕ್ರಿಯಿಸಿರುವ ತೇಜಸ್ವಿ ಸೂರ್ಯ, ವಿ‌. ಸೋಮಣ್ಣ ನನಗೆ ತಂದೆ ಸಮಾನರು. ಅವರ ಮನೆಯಲ್ಲಿ ಯಾವುದೇ ಚರ್ಚೆಗಳು ನಡೆದಿಲ್ಲ. ನನಗೆ ಅವರು ಯಾವುದೇ ಕ್ಲಾಸ್ ತೆಗೆದುಕೊಂಡಿಲ್ಲ. ನನ್ನ ಬೆಳವಣಿಗೆಯನ್ನು ನೋಡಿ ಅತಿ ಹೆಚ್ಚು ಖುಷಿ ಪಟ್ಟವರಲ್ಲಿ ಅವರು ಕೂಡ ಒಬ್ಬರು. ನನ್ನ ಭಾಷಣಗಳನ್ನು ಗಮನಿಸಿ ಅವರ ಪುತ್ರ ಡಾ‌.ಅರುಣ್ ಅವರಿಗೂ ಮಾತನ್ನಾಡುವುದನ್ನು ಕಲಿ ಎಂದಿದ್ದಾರೆ. ಇದನ್ನು ಹೊರತುಪಡಿಸಿ ಬೇರೆ ಯಾವುದೇ ವಿಚಾರಗಳನ್ನು ಪ್ರಸ್ತಾಪಿಸಿಲ್ಲ ಅಂತಾ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:‘ನಮಗೆ ಗೆಲ್ಸೋದೂ.. ಸೋಲ್ಸೋದು ಗೊತ್ತು’ :ತೇಜಸ್ವಿ ಸೂರ್ಯಗೆ ಸೋಮಣ್ಣ ಕ್ಲಾಸ್​


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv