ಟೀಮ್ ಇಂಡಿಯಾ ಆಟಗಾರರಿಗೆ​ ಹೊಸ ಪ್ರಾಕ್ಟೀಸ್​​ ಕಿಟ್​​​..!

ಐಪಿಎಲ್​ 11ನೇ ಆವೃತ್ತಿ ಟೂರ್ನಿ ಮುಗಿಯುತ್ತಿದ್ದಂತೆ, ಟೀಮ್ ಇಂಡಿಯಾ ಬಾಯ್ಸ್​​​ ಟಿ-20 ಮೂಡ್​ನಿಂದ, ಟೆಸ್ಟ್​ ಮೂಡ್​​ನತ್ತ ಯು ಟರ್ನ್​​ ಮಾಡ್ತಿದ್ದಾರೆ. ಬಿಸಿಸಿಐನಿಂದ ಹೊಸ ಕಿಟ್​ ಪಡೆದಿರುವ ಟೀಮ್ ಇಂಡಿಯಾ, ಆಫ್ಘಾನ್​ ವಿರುದ್ಧದ ಟೆಸ್ಟ್​​ಗಾಗಿ ಭರ್ಜರಿ ತಯಾರಿ ನಡೆಸಿದೆ. ಐತಿಹಾಸಿಕ ಟೆಸ್ಟ್​​ ಪಂದ್ಯಕ್ಕಾಗಿ ಎಂ.ಚಿನ್ನಸ್ವಾಮಿ ಕ್ರೀಡಾಂಗಣ ಸಜ್ಜಾಗಿದ್ದು, ಉಭಯ ತಂಡದ ಆಟಗಾರರು ಅಭ್ಯಾಸದಲ್ಲಿ ನಿರತರಾಗಿದ್ದಾರೆ.

ಹೊಸ ಡ್ರೆಸ್​​ನಲ್ಲಿ ಟೀಮ್ ಇಂಡಿಯಾ ಮಿಂಚಿಂಗ್​
2018-19ರ ಕ್ರಿಕೆಟ್​ ಋತು ಆರಂಭಕ್ಕೂ ಮುನ್ನ ಬಿಸಿಸಿಐ ಟೀಮ್ ಇಂಡಿಯಾ ಹುಡುಗರಿಗೆ ಹೊಸ ಕಿಟ್​ ನೀಡಿದೆ. ಸದ್ಯ ಆಫ್ಘಾನ್ ವಿರುದ್ಧದ ಟೆಸ್ಟ್​​ಗಾಗಿ ಬೆಂಗಳೂರಿನಲ್ಲಿ ಅಭ್ಯಾಸ ಆರಂಭಿಸಿರುವ ಭಾರತೀಯ ತಂಡ, ಹೊಸ ಬಟ್ಟೆ ತೊಟ್ಟು ಮಿಂಚೋದಕ್ಕೆ ಶುರು ಮಾಡಿದೆ. ಹೊಸ ಕಿಟ್​ ಪಡೆದ ಆಟಗಾರರು ಸದ್ಯ ಪ್ರಾಕ್ಟೀಸ್​​ನಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ವಿರಾಟ್​ ಕೊಹ್ಲಿ ಅನುಪಸ್ಥಿತಿಯಲ್ಲಿ ಅಜಿಂಕ್ಯಾ ರಹಾನೆ ತಂಡವನ್ನು ಮುನ್ನಡೆಸುತ್ತಿದ್ದು ಕೋಚ್ ರವಿ ಶಾಸ್ತ್ರಿ ಗರಡಿಯಲ್ಲಿ ಬೆವರಿಳಿಸುತ್ತಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv