ಚುನಾವಣಾ ತರಬೇತಿಗೆ ಬಂದಿದ್ದ ಶಿಕ್ಷಕ ಹೃದಯಾಘಾತದಿಂದ ಸಾವು

ಬಳ್ಳಾರಿ: ಚುನಾವಣಾ ತರಬೇತಿಗೆ ಬಂದಿದ್ದ ಶಿಕ್ಷಕರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಸಿರಗುಪ್ಪ ನಿವಾಸಿ ರಮೇಶ್ (46) ಸಾವನ್ನಪ್ಪಿದ ಶಿಕ್ಷಕ. ಜಿಲ್ಲೆಯ ಸಿರುಗುಪ್ಪ ಶಾಲೆಯಲ್ಲಿ ರಮೇಶ್ ಅವರು ದೈಹಿಕ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದರು. ಇಂದು ನಗರದ ವಿವೇಕಾನಂದ ಶಾಲೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ತರಬೇತಿ ಪಡೆಯಲು ಬಂದಿದ್ದರು. ತರಬೇತಿ ಸಮಯದಲ್ಲಿ ರಮೇಶ್ ಅವರಿಗೆ ಹೃದಯಾಘಾತಯಿತು. ಸಹಾಯಕ ಚುನಾವಣಾಧಿಕಾರಿ ಹಾಗೂ ತಹಸೀಲ್ದಾರ್ ತಕ್ಷಣ ಆಂಬುಲೆನ್ಸ್ ಕರೆಸಿ ರಮೇಶ್ ಅವರನ್ನ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಸಾವನ್ನಪ್ಪಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv