ಶಿಕ್ಷಕ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಅರುಣ್​ರನ್ನು ಗೆಲ್ಲಿಸಿ: ಹಾಸ್ಯನಟ ಟೆನ್ನಿಸ್​ ಕೃಷ್ಣ

ಶಿವಮೊಗ್ಗ: ನೈರುತ್ಯ ಶಿಕ್ಷಕ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯಾಗಿ ತೀರ್ಥಹಳ್ಳಿಯ ಅರುಣ್​​ ಹೊಸಕೊಪ್ಪ ಕಣಕ್ಕಿಳಿದಿದ್ದಾರೆ. ಅರುಣ್​ ಅವರು ಶಿಕ್ಷಣ ಕ್ಷೇತ್ರದಲ್ಲಿ ಸಂಘಟನೆ ಮತ್ತು ಹೋರಾಟ ಮಾಡಿಕೊಂಡು ಬಂದಿದ್ದಾರೆ. ಶಿಕ್ಷಕರಾಗಿ ಸೇವೆ ಸಲ್ಲಿಸಿದ ಅನುಭವ ಕೂಡ ಅವರಿಗಿದೆ ಎಂದು ಹಾಸ್ಯನಟ ಟೆನ್ನಿಸ್​ ಕೃಷ್ಣ ವಿಶ್ವಾಸಪಟ್ಟರು.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿಕ್ಷಕ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲಿರುವ ಅರುಣ್​ ಅವರಿಗೆ ಶಿಕ್ಷಕರು ಸಹಕಾರ ನೀಡಬೇಕು. ಶಿಕ್ಷಕರ ಕ್ಷೇತ್ರಕ್ಕೆ​ ಅವರ ಆಯ್ಕೆ ಅಗತ್ಯವಾಗಿದ್ದು, ಅರುಣ್​ರನ್ನು ಗೆಲ್ಲಿಸಿ ಎಂದು ಮನವಿ ಮಾಡಿಕೊಂಡರು.
ಇನ್ನು ನಾನು ಕಳೆದ ವರ್ಷ ವಿಕೇಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಚಿತ್ರರಂಗ ಕ್ಷೇತ್ರದಲ್ಲಿ ಹಿರಿಯ ಕಲಾವಿದರು ಮತ್ತು ತಂತ್ರಜ್ಞರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ವ್ಯಕ್ತಪಡಿಸಿದ್ದೆ. ಆಗ ನನಗೆ ಅರುಣ್​ ಅವರು ‘ ಮತ್ತೆ ಮತ್ತೆ’ ಎಂಬ ಚಲನಚಿತ್ರವೊಂದನ್ನು ನಿರ್ದೇಶಿಸಲು ನನಗೆ ಅವಕಾಶ ಮಾಡಿಕೊಟ್ಟಿದ್ದರು ಎಂದು ನೆನಪು ಮಾಡಿಕೊಂಡರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv