‘ಪಾಕಿಸ್ತಾನ ಕಿ ಜೈ ಹೋ’ ಅಂತಾ ಫೋಸ್ಟ್ ಹಾಕಿದ್ದ ಬೆಳಗಾವಿಯ ವಿಕೃತ ಶಿಕ್ಷಕಿ ವಶಕ್ಕೆ..!

ಬೆಳಗಾವಿ: ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ‌ ನಡೆದ ಉಗ್ರರ ದಾಳಿಯಿಂದ ಹುತಾತ್ಮರಾಗಿರುವ ಯೋಧರಿಗಾಗಿ ದೇಶವೇ ಕಣ್ಣೀರಿನಲ್ಲಿ ಮುಳುಗಿದೆ. ಈ ಮಧ್ಯೆಯೇ ಬೆಳಗಾವಿ ಖಾಸಗಿ‌ ಶಾಲೆಯ ಶಿಕ್ಷಕಿಯೊಬ್ಬಳು ಸಾಮಾಜಿಕ ಜಾಲತಾಣಗಳಲ್ಲಿ ದೇಶದ್ರೋಹಿ‌ ಫೋಸ್ಟ್ ಹಾಕಿ ವಿಕೃತಿ‌ ಮರೆದಿರುವ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಕಡಬಿ ಶಿವಾಪುರ ಗ್ರಾಮದ ಶಿಕ್ಷಕಿ ಜುಲೇಕಾ ಮಮದಾಪುರ ಸಾಮಾಜಿಕ ಜಾಲತಾಣಗಳಲ್ಲಿ ದೇಶದ್ರೋಹಿ ಫೋಸ್ಟ್ ಮಾಡಿದ್ದು, ಫೆಸ್ಬುಕ್ ಹಾಗೂ ವಾಟ್ಸ್ ಅಪ್ ಸ್ಟೇಟಸ್ ನಲ್ಲಿ‌ ಪಾಕಿಸ್ತಾನ ಜಿಂದಾಬಾದ್,‌ ಪಾಕಿಸ್ತಾನ‌ ಕೀ ಜೈ ಎಂದು ಬರೆದುಕೊಂಡಿದ್ದಾಳೆ. ಅಲ್ಲದೇ ಜೈ‌ ಪಾಕಿಸ್ತಾನ ಎಂಬ ಅಕ್ಷರ‌ ಇರುವ ಇಮೇಜ್ ಅನ್ನು ವಾಟ್ಸ್ ಅಪ್ ಡಿಪಿ ಇಟ್ಟುಕೊಂಡಿದ್ದಾಳೆ. ಶಿಕ್ಷಕಿ ವರ್ತನೆಗೆ ಗ್ರಾಮದ ಯುವಕರು ಅಸಮಾಧಾನ ‌ವ್ಯಕ್ತಪಡಿಸಿದ್ದು, ಶಿಕ್ಷ‌ಕಿ ಜಿಲೇಕಾ ಅವರ ಮನೆ ಮೇಲೆ‌ ಕಲ್ಲು ತೂರಿ,‌ ಮನೆಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಶಿಕ್ಷಕಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಯರಗಟ್ಟಿಯಲ್ಲಿ ಜನರು ನಿನ್ನೆ ತಡರಾತ್ರಿ 2 ಗಂಟೆಗಳ ಕಾಲ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಎಚ್ಚೆತ್ತ‌ ಮುರಗೋಡ ಠಾಣೆಯ ಪೊಲೀಸರು, ಸದ್ಯ ಶಿಕ್ಷಕಿ ಜುಲೇಕಾ ಮಮದಾಪುರಳನ್ನು ವಶಕ್ಕೆ ಪಡೆದಿದ್ದಾರೆ. ಗ್ರಾಮದಲ್ಲಿ ಬಿಗುವಿನ ವಾತಾವರಣ ‌ನಿರ್ಮಾಣವಾಗಿದೆ.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv