2 ತಿಂಗಳು ಇಎಂಐ ಕಟ್ಲಿಲ್ಲ ಎಂದು ಕಾರು ಸೀಜ್ ಮಾಡಿದ ಫೈನಾನ್ಸ್​ ಕಂಪನಿ..!

ಬೆಂಗಳೂರು: ಎರಡು ತಿಂಗಳ ಇಎಂಐ ಕಟ್ಟಿಲ್ಲ ಎಂಬ ಕಾರಣಕ್ಕೆ ಫೈನಾನ್ಸ್​ ಕಂಪನಿಯೊಂದು ಮಾಲೀಕನಿಗೂ ನೋಟಿಸ್​ ನೀಡದೇ ಕಾರ್​ ಸೀಜ್ ಮಾಡಿ ಬೇರೆಯವರಿಗೆ ಮಾರಾಟ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ನಗರದ ನಾಗರಾಜ್ ಅನ್ನೋರು XUV 500 ಕಾರನ್ನ ಟಾಟಾ ಕ್ಯಾಪಿಟಲ್ ಫೈನಾನ್ಸ್ ಕಂಪನಿಯ ಲೋನ್ ಮೂಲಕ ಖರೀದಿಸಿದ್ದರು. ಇನ್ನ ಕೇವಲ 6 ತಿಂಗಳ ಇಎಂಐ ಕಟ್ಟಿದ್ರೆ ಲೋನ್ ಕ್ಲಿಯರ್ ಆಗ್ತಿತ್ತು. ಆದ್ರೆ ಕೇವಲ 2 ತಿಂಗಳು ಇಎಂಐ ಕಟ್ಟದೇ ಬಾಕಿ ಉಳಿಸಿಕೊಂಡಿದ್ದರು. ಅಷ್ಟರಲ್ಲಿ ಟಾಟಾ ಕ್ಯಾಪಿಟಲ್ ಫೈನಾನ್ಸ್ ಕಂಪನಿಯವರು ಬಂದು ಕಾರನ್ನ ಸೀಜ್ ಮಾಡಿದ್ದಾರೆ. ಮಾಲೀಕ ನಾಗರಾಜ್​ಗೂ ನೋಟಿಸ್​ ನೀಡದೇ ಆ ಕಾರನ್ನ ಬೇರೆಯವರಿಗೆ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ನಂತರ ಟಾಟಾ ಕ್ಯಾಪಿಟಲ್ ಫೈನಾನ್ಸ್​ ಕಂಪನಿಯಿಂದ ಕಾರು ಕೊಂಡ ಗ್ರಾಹಕ, ನಾಗರಾಜ್​ಗೆ ಪೋನ್ ಮಾಡಿ ನಿಮ್ಮ ಕಾರಿನ ಡಾಕ್ಯೂಮೆಂಟ್ಸ್​ ಕೊಡಿ ನಾವು ಫೈನಾನ್ಸ್​ ಕಂಪನಿಯಿಂದ ಕೊಂಡುಕೊಂಡಿದ್ದೇವೆ ಎಂದಿದ್ದಾರೆ.

ನಾಗರಾಜ್ ಮಾತ್ರವಲ್ಲದೇ ಸಂತೋಷ್ ಅನ್ನೋ ವ್ಯಕ್ತಿಗೂ ಇದೇ ರೀತಿ ವಂಚನೆ ಮಾಡಿದ್ದಾರೆ ಎನ್ನಲಾಗಿದೆ. ಸಂತೋಷ್ ಅನ್ನೋ ವ್ಯಕ್ತಿ ಲೋನ್ ಮೂಲಕ ಸ್ವಿಫ್ಟ್ ಕಾರ್​ ಖರೀದಿ‌ ಮಾಡಿದ್ರು. ಎರಡು ತಿಂಗಳ ಇಎಂಐ ಕಟ್ಟಿಲ್ಲ ಅಂತಾ ಕಾರನ್ನ ಸೀಜ್ ಮಾಡಿ ಬೇರೆಯವರಿಗೆ ಮಾರಾಟ ಮಾಡಿದ್ದಾರೆ. ಇದೇ ರೀತಿ ಹತ್ತಾರು ಗ್ರಾಹಕರಿಗೆ ವಂಚನೆ‌‌ ಮಾಡಿರುವ ಆರೋಪ ಟಾಟಾ ಕ್ಯಾಪಿಟಲ್ ಫೈನಾನ್ಸ್ ಕಂಪನಿ ವಿರುದ್ಧ ಕೇಳಿ ಬಂದಿದೆ. ಈ ಸಂಬಂಧ ಮ್ಯಾನೇಜರ್ ಅರುಣ್ ವಿರುದ್ಧ ಆಶೋಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv