ಕುಂದಗೋಳದಲ್ಲಿ ತಾರಾ ಕಮಾಲ್, ಕಮಲಕ್ಕಾಗಿ ಕೊಡಿ ಅಂದ್ರು ವೋಟ್..!

ಹುಬ್ಬಳ್ಳಿ: ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್ ಜೋಶಿಪರ ಚಿತ್ರ ನಟಿ ತಾರಾ ಅನುರಾಧಾ ಪ್ರಚಾರ ಮಾಡುತ್ತಿದ್ದು, ಇಂದು ಧಾರವಾಡ ಲೋಕಸಭಾ ವ್ಯಾಪ್ತಿಯ ಕುಂದಗೋಳಕ್ಕೆ ಭೇಟಿ ನೀಡಿ ರೋಡ್ ಶೋ ನಡೆಸುವುದರ ಮೂಲಕ ಬಿಜೆಪಿ ಅಭ್ಯರ್ಥಿ ಜೋಶಿ ಪರ ಮತಯಾಚನೆ ಮಾಡಿದ್ದಾರೆ. ಇನ್ನು ತಾರ ಅನುರಾಧಾ ನರೇಂದ್ರ ಮೋದಿಯನ್ನು  ಪ್ರಧಾನಿ ಮಾಡಲು ಪ್ರಲ್ಹಾದ ಜೋಶಿಗೆ ಮತ ನೀಡಿ ಎಂದು ಮನವಿ ಮಾಡಿಕೊಂಡಿದ್ದು,  ಕುಂದಗೋಳ ಕನಕದಾಸ ವೃತದಿಂದ ಎಸ್ ಸಿ‌ ಕಾಲನಿಯವರೆಗೂ ರೋಡ್​ ಶೋ ನಡೆಸಿ ಮತಯಾಚನೆ ಮಾಡಿದ್ರು. ಅಂದ್ಹಾಗೆ ತಾರಾ ಅನುರಾಧಾ ರೋಡ್ ಶೋನಲ್ಲಿ ಐನೂರಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದು, ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್​ ಸೇರಿದಂತೆ ಇನ್ನು ಹಲವರು ಸಾಥ್ ನೀಡಿದ್ರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv