ಮೂರರ ಪೋರನ ಟ್ಯಾಲೆಂಟ್​​ಗೆ ಜನ ಫುಲ್ ಫಿದಾ..!

ಕೊಪ್ಪಳ: ಕಾರಟಗಿಯಲ್ಲಿ ಮೂರು ವರ್ಷದ ಪೋರನೊಬ್ಬ ಪ್ರಾಣಿ, ಪಕ್ಷಿಗಳ, ರಾಜಕೀಯ ಹಾಗೂ ರಾಷ್ಟ್ರ ನಾಯಕರ ಹೆಸರುಗಳನ್ನು ಹೇಳುವ ಮೂಲಕ ಗಮನ ಸೆಳೆಯುತ್ತಿದ್ದಾನೆ.

ಕಾರಟಗಿಯ ನಿಂಗರಾಜ್​ (ಜಾನಿಮೂನ್) ಹಾಗೂ ಜ್ಯೋತಿಯವರ ಪುತ್ರನಾಗಿರುವ ರೋಹಿತ್​ ಹಲವು ಪ್ರಶ್ನೆಗಳಿಗೆ ಪಟಾಪಟ್ ಉತ್ತರ ಹೇಳುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಲಕ್ಷಾಂತರ ಜನರು ಈ ವಿಡಿಯೋವನ್ನು ವೀಕ್ಷಣೆ ಮಾಡಿದ್ದಾರೆ. ಬಾಲಕನ ಮುಗ್ಧ ತೊದಲು ಉತ್ತರಗಳಿಗೆ ಜನ ಫಿಧಾ ಆಗಿದ್ದು, ಏನಪ್ಪಾ ಈ ಪೋರನ ಟ್ಯಾಲೆಂಟು ಅಂತಾ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಈ ಬಾಲಕ ಕೊಪ್ಪಳದ ಮಿನಿ ಜೀನಿಯಸ್​ ಅಂತಾ ಪ್ರಸಿದ್ಧಿ ಪಡೆದಿದ್ದಾನೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv