ಸ್ಟ್ರೆಸ್​ ಕಡಿಮೆ ಮಾಡುತ್ತೆ ಬ್ರೀದಿಂಗ್​ ಎಕ್ಸಸೈಸ್..

ವ್ಯಾಯಾಮಗಳನ್ನ ಮಾಡುವುದರಿಂದ ಹೆಲ್ದಿಯಾಗಿರುತ್ತೇವೆ. ಇದು ಎಲ್ಲಾರಿಗೂ ಗೊತ್ತಿರುವ ಸತ್ಯ.. ಆದ್ರೆ ಸದಾ ಫಿಟ್​ ಆ್ಯಂಡ್​ ಫೈನ್​ ಆಗಿರಬೇಕು ಅಂತಾ ಅನ್ನೋರು ಸಖತಾಗಿ ವರ್ಕೌಟ್​ ಮಾಡಿ, ಬಾಡಿ ಬಿಲ್ಡ್​ ಮಾಡ್ತಾರೆ. ಹಾಗೇ ವ್ಯಾಯಾಮಗಳು ಕೇವಲ ಫಿಟ್​ನೆಸ್​ಗಷ್ಟೇ ಅಲ್ಲ. ಜೊತೆಗೆ ಸ್ಟ್ರೆಸ್​ ಕಡಿಮೆ ಮಾಡಲು ಕೂಡಾ ಇದು ಸಹಾಯಕಾರಿ. ಈ ವ್ಯಾಯಾಮಗಳ ಜೊತೆ ಪ್ರತಿದಿನ ಬ್ರೀದಿಂಗ್​ ಎಕ್ಸಸೈಸ್​ ಕೂಡಾ ನಿಮಗೆ ಸಾಕಷ್ಟು ಆರೋಗ್ಯದ ಪ್ರಯೋಜನಗಳನ್ನ ನೀಡುತ್ತದೆ.

ಬ್ರೀದಿಂಗ್​ ಎಕ್ಸಸೈಸ್ ಒತ್ತಡವನ್ನು ಕಡಿಮೆ ಮಾಡುತ್ತದೆ ಜೊತೆಗೆ ರಕ್ತದೊತ್ತಡವನ್ನೂ ಕೂಡಾ ನಿಯಂತ್ರಿಸುತ್ತದೆ. ಇದು ಕೆಲವೊಮ್ಮೆ ಔಷಧಿಗಳಿಗಿಂತ ವೇಗವಾಗಿ ರಕ್ತದೊತ್ತಡವನ್ನ ಗುಣವಾಗಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ ಈ ವ್ಯಾಯಾಮ ಮಾಡುವುದರಿಂದ ಉಸಿರಾಟದ ತೊಂದರೆ ಕಡಿಮೆಯಾಗುತ್ತದೆ. ಕೆಮ್ಮು, ಅಸ್ತಮಾಗಳಂತಹ ಆರೋಗ್ಯದ ಸಮಸ್ಯೆಗೆ ಪರಿಹಾರ ನೀಡುತ್ತದೆ.

ಸ್ಟ್ರೆಸ್​​​ಗೆ ಟಾನಿಕ್ಸ್..!

ನೆಲದ ಮೇಲೆ ಕುಳಿತುಕೊಂಡು ಕಾಲುಗಳನ್ನ ಮಡಚಿ ನೇರವಾಗಿ ಕುಳಿತುಕೊಳ್ಳಿ
1. 4 ಸೆಕೆಂಡುಗಳ ಕಾಲ ನಿಧಾನವಾಗಿ ಉಸಿರಾಡಿ: 4 ಸೆಕೆಂಡುಗಳ ಕಾಲ ಬಾಯಿಯನ್ನ ಮುಚ್ಚಿ, ಮೂಗಿನಿಂದ ಗಾಳಿಯನ್ನ ತೆಗೆದುಕೊಂಡು, ಮೂಗಿನಿಂದಲೇ ಹೊರಗೆ ಬಿಡಿ. ಹೀಗೆ 4 ಸೆಕೆಂಡುಗಳ ಕಾಲ ಮಾಡಿ.

2. 7 ಸೆಕೆಂಡುಗಳ ಕಾಲ ಉಸಿರನ್ನು ಹಿಡಿದಿಟ್ಟುಕೊಳ್ಳಿ: 4 ಸೆಕೆಂಡ್​ಗಳ ಕಾಲ ನಿಧಾನವಾಗಿ ಉಸಿರಾಡಿ, ನಂತರ 7 ಸೆಕೆಂಡ್ ಉಸಿರನ್ನು ಹಿಡಿದಿಟ್ಟುಕೊಳ್ಳಿ. ಈ ವೇಳೆ ಯಾವುದೇ ಒತ್ತಡಕ್ಕೊಳಗಾಗದೇ  ಆರಾಮಾಗಿ ಉಸಿರಾಡಿ.

3. 8 ಸೆಕೆಂಡ್​ಗಳ ಕಾಲ ನಿಧಾನವಾಗಿ ಉಸಿರು ಬಿಡಿ: 7 ಸೆಕೆಂಡುಗಳ ಕಾಲ ಉಸಿರಾಟವನ್ನು ಹಿಡಿದಿಟ್ಟುಕೊಂಡ ನಂತರ ನಿಧಾನವಾಗಿ ಉಸಿರನ್ನ ಹೊರಗೆ ಬಿಡಿ. ಮತ್ತೆ 8 ಸೆಕೆಂಡ್​ಗಳ ಕಾಲ ನಿಧಾನವಾಗಿ ಉಸಿರಾಡಿ.

ಹೀಗೆ 3 ಬಾರಿ ಪುನರಾವರ್ತಿಸಿ ಈ ಉಸಿರಾಟದ ವ್ಯಾಯಾಮವು ಎಲ್ಲರಿಗೂ ಸಹಾಯಕವಾಗಿದ್ದು ಪ್ರತಿನಿತ್ಯ ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಉತ್ತಮ ಆರೋಗ್ಯ ಹೊಂದಬಹುದು ಜೊತೆಗೆ ಉಸಿರಾಟದ ಸಮಸ್ಯೆಗಳು ಪರಿಹಾರವಾಗುತ್ತದೆ.