ಸ್ಕಿನ್ ಕೇರ್ ಬರೀ ವಿಶ್ವ ಸುಂದರಿಗಲ್ಲ, ನೀವು ಮಾಡಿಕೊಳ್ಳಲೇಬೇಕು..!

ಎಲ್ಲಿ ನೋಡಿದ್ರು ದೊಡ್ಡ ದೊಡ್ಡ ಇಂಡಸ್ಟ್ರೀಸ್, ಹೆಚ್ಚಾಗ್ತಿರೋ ವಾಹನಗಳು, ಕಣ್ಮರೆಯಾಗುತ್ತಿರುವ ಕಾಡುಗಳು, ಎಲ್ಲೆಲ್ಲೂ-ಎಲ್ಲದರಲ್ಲೂ ಕಲಬೆರಕೆ. ಹೀಗಾಗಿ, ಪೊಲ್ಯೂಷನ್ ಅನ್ನೋದಕ್ಕೆ ಕಂಟ್ರೋಲೆ ಇಲ್ಲದಂತಾಗ್ಬಿಟ್ಟಿದೆ. ಇಂಥದ್ರಲ್ಲಿ ಹೂವಿನ ಎಸಳಷ್ಟು ಸೂಕ್ಷ್ಮವಾದ ನಮ್ಮ ಚರ್ಮ, ಇದರಿಂದಾಗಿ ಬಾಡಿದ ಹೂವಾಗೋದು ಗ್ಯಾರಂಟಿ. ಪಂಚೇಂದ್ರಿಯಗಳಲ್ಲಿ ಒಂದಾದ ಚರ್ಮ ಬರೀ ಅಂದವನ್ನು ಹೆಚ್ಚಿಸೋದಲ್ಲ, ಆರೋಗ್ಯಕ್ಕೂ ಹಿಡಿದ ಕನ್ನಡಿ. ಹೀಗಾಗಿ ಚರ್ಮದ ಆರೈಕೆ ಅತ್ಯಂತ ಅವಶ್ಯಕವಾಗಿದೆ.

ಪೊಲ್ಯೂಷನ್​ನಿಂದ ಚರ್ಮಕ್ಕೆ ಆಗುವ ತೊಂದರೆಗಳೇನು..?
ಮಾಲಿನ್ಯದ ಕಾರಣದಿಂದಾಗಿ ಪಿಗ್ಮೆಂಟೇಷನ್; ಅಂದ್ರೆ ಚರ್ಮದ ಬಣ್ಣಗಳಲ್ಲಿ ವ್ಯತ್ಯಾಸ, ಚರ್ಮದ ಸುಕ್ಕುಗಟ್ಟುವಿಕೆ, ವಯಸ್ಸಾದಂತೆ ಕಾಣುವುದು, ಮೊಡವೆಗಳು ಹೆಚ್ಚುವುದು, ಚರ್ಮ ಕಾಂತಿಯನ್ನ ಕಳೆದುಕೊಳ್ಳುವುದು ಇವೆಲ್ಲಾ ಮಾಲಿನ್ಯದ ಸೈಡ್ ಎಫೆಕ್ಟ್ಸ್​ ಅಂತಾನೆ ಹೇಳಬಹುದು. ಅಷ್ಟೇ ಅಲ್ಲ ಬೆವರು ಗುಳ್ಳೆಗಳು ಹೆಚ್ಚುವುದು, ಚರ್ಮ ಸಂಬಂಧಿತ ಕಾಯಿಲೆಗಳು ಉಂಟಾಗುವುದರಲ್ಲಿಯೂ ಪೊಲ್ಯೂಷನ್ ಪಾತ್ರ ದೊಡ್ಡದು. ಇದು ಯುವಕರು ಹಾಗೂ ಯುವತಿಯರಿಬ್ಬರಿಗೂ ತೊಂದರೆದಾಯಕವೇ.

ಪೊಲ್ಯೂಷನ್​​ ನಿಂದ ಸ್ಕಿನ್ ಕೇರ್ ಮಾಡೋದು ಹೇಗೆ?

1. ಕ್ಲೆನ್ಸಿಂಗ್
ಸ್ಕಿನ್​ ಕೇರ್​ನಲ್ಲಿ ಅತ್ಯಂತ ಪ್ರಮುಖ ಘಟ್ಟ ಎಂದರೆ ಕ್ಲೆನ್ಸಿಂಗ್. ಅತಿಯಾದ ಬಿಸಿ ಅಥವಾ ಕೋಲ್ಡ್ ನೀರು ಸ್ಕಿನ್​ಗೆ ಒಳ್ಳೆಯದಲ್ಲ. ಹೀಗಾಗಿ, ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ಕ್ಲೀನ್ ಮಾಡಿಕೊಳ್ಳಬೇಕು. ಜೊತೆಗೆ, ವಿಟಮಿನ್ ಸಿ ಅಥವಾ ಇ ಯುಕ್ತ, ಗ್ರೀನ್ ಟೀ, ಮೊಸರು ಅಥವಾ ನ್ಯಾಚುರಲ್ ಅಂಶಗಳನ್ನ ಹೊಂದಿರುವ ಫೇಸ್​ವಾಶ್​ಗಳನ್ನು ಬಳಸಬಹುದು.

2. ಸ್ಕ್ರಬ್ಬಿಂಗ್
ವಾರದಲ್ಲಿ ಕನಿಷ್ಟ ಎರಡು ಬಾರಿಯಾದರೂ ಸ್ಕ್ರಬ್ಬಿಂಗ್ ಮಾಡುವುದು ಉತ್ತಮ. ಮನೆಯಲ್ಲೇ ಹಾಲಿನ ಕೆನೆ, ಅರಿಶಿಣ, ಮೊಸರು ಮುಂತಾದವುಗಳನ್ನು ಬಳಸಿ ಸ್ಕ್ರಬ್ಬಿಂಗ್ ಮಾಡಿಕೊಳ್ಳಬಹುದು. ಒಂದು ವೇಳೆ ನಿಮಗೆ ಮನೆಯಲ್ಲೇ ಸ್ಕ್ರಬ್ ತಯಾರಿಸಲು ಅಷ್ಟು ಸಮಯ ಇಲ್ಲವೆಂದ್ರೆ, ಉತ್ತಮ ಕ್ವಾಲಿಟಿಯ ಆಯುರ್ವೇದಿಕ್ ಸ್ಕ್ರಬ್ಬಿಂಗ್ ಕ್ರೀಂಗಳನ್ನು ಕೂಡ ಬಳಸಬಹುದು. ಇದ್ರಿಂದಾಗಿ ಮುಖದ ಮೇಲಿರುವ ಡೆಡ್ ಸೆಲ್ಸ್ ತೆಗೆಯಲು ಸಹಾಯವಾಗುತ್ತದೆ. ಜೊತೆಗೆ, ಕಣ್ಣಿನ ಕೆಳಗಿನ ಡಾರ್ಕ್​​​ ಸರ್ಕಲ್ ಕೂಡ ನಿವಾರಣೆ ಮಾಡಿಕೊಳ್ಳಬಹುದು.

3. ಮಾಸ್ಕ್ ಹಾಕಿ
ಮುಲ್ತಾನಿ ಮಿಟ್ಟಿ ಅಥವಾ ಟೀ ಬ್ಯಾಗ್​​ನಿಂದ ಮಾಡಲಾದ ಮಾಸ್ಕ್ ಗಳನ್ನ ಹಾಕುವುದು ಉತ್ತಮ. ಇದರಿಂದ ಮೊಡವೆ, ಕಪ್ಪು ಕಲೆಗಳಾಗುವುದು ಸ್ಟಾಪ್ ಆಗುವುದರ ಜೊತೆಗೆ, ಚರ್ಮದ ಕಾಂತಿ ಹೆಚ್ಚುತ್ತದೆ.

4. ಟೋನ್ ಮಾಡಬೇಕು
ಫೇಸ್ ಮಾಸ್ಕ್ ಹಾಕಿದ ದಿನವನ್ನ ಬಿಟ್ಟು ಪ್ರತಿನಿತ್ಯ ಸಾಫ್ಟ್​​ ಆಗಿ ಮಸಾಜ್ ಮಾಡಿಕೊಳ್ಳಿ. ಅಲ್ಲದೇ, ಕೆಮಿಕಲ್​​​​​ಯುಕ್ತ ಸೋಪ್​ಗಳನ್ನು ಬಳಸುವುದುನ್ನು ಆದಷ್ಟು ಕಡಿಮೆ ಮಾಡಿ. ಅದರ ಬದಲು ಆಲೋವೆರಾ ಮುಂತಾದವುಗಳನ್ನು ಬಳಸುವುದರಿಂದ ಚರ್ಮಕ್ಕೆ ಕೂಲಿಂಗ್ ಎಫೆಕ್ಟ್ ಬರುತ್ತೆ.

5. ತೇವಾಂಶ ಕಾಪಾಡಿ
ಪ್ರತಿ ಬಾರಿ ನೀವು ಫೇಸ್ ವಾಶ್ ಮಾಡಿದ ನಂತರ ಮಾಯ್​​ಶ್ಚರೈಸರ್ ಬಳಸಿ. ಇಲ್ಲವೇ, ನೀರಿನಂಶ ಹೆಚ್ಚಾಗಿರುವ ಆಹಾರ ಪದಾರ್ಥ ಸೇವಿಸ್ತಾ ಇರಿ. ಹೆಚ್ಚು ಹೆಚ್ಚು ನೀರು ಕುಡಿಯಿರಿ. ಇದು ನಿಮ್ಮ ಚರ್ಮದ ತೇವಾಂಶವನ್ನು ಕಾಪಾಡುತ್ತದೆ.

6. ಸೂರ್ಯನ ತೀಕ್ಷ್ಣ ಕಿರಣಗಳಿಂದ ಚರ್ಮವನ್ನು ಕಾಪಾಡಿ
ಸೂರ್ಯನ ಕಿರಣಗಳಿಗೆ ಮುಖ ಒಡ್ಡುವ ಮುಂಚೆ ಮರೆಯದೆ ಸನ್​​​​ಸ್ಕ್ರೀನ್ ಬಳಸಿ. ಒಂದು ವೇಳೆ ನಿಮಗೆ ಸನ್​​​​ಸ್ಕ್ರೀನ್ ಸೆಟ್ ಆಗದಿದ್ದರೆ ಎಳೆ ಬಿಸಿಲು ಹೊರತುಪಡಿಸಿ ಉಳಿದ ಸಮಯದಲ್ಲಿ ಬಿಸಿಲಿಗೆ ನಿಮ್ಮ ಚರ್ಮವನ್ನು ಎಕ್ಸ್​​ಪೋಸ್ ಮಾಡದಂತೆ ವೇಲ್, ಮಾಸ್ಕ್ ಬಳಸಿ.

ವಿಶೇಷ ಬರಹ: ಪವಿತ್ರ