ಬ್ಯಾಂಕ್​ನಲ್ಲಿ ಕ್ಯೂ ನಿಲ್ತೀರಿ, ಇಲ್ಲಿ ನಿಲ್ಲೋಕೆ ನಿಮಗೇನು?: ತಹಶೀಲ್ದಾರ್​​ ಅವಾಜ್​​

ತುಮಕೂರು: ಬ್ಯಾಂಕ್​​ನಲ್ಲಿ ಕ್ಯೂ ನಿಲ್ತೀರಿ. ಇಲ್ಲಿ ನಿಲ್ಲೋಕೆ ನಿಮಗೇನು ಎಂದು ಸಾರ್ವಜನಿಕರಿಗೆ ತಹಶೀಲ್ದಾರ್​​ ಅವಾಜ್​ ಹಾಕಿರುವ ಘಟನೆ ಇಂದು ತುಮಕೂರಿನಲ್ಲಿ ನಡೆದಿದೆ.
ತುಮಕೂರು ಜಿಲ್ಲಾಧಿಕಾರಿ ಸಂಕೀರ್ಣದ ಕಂದಾಯ ಇಲಾಖೆಯ ನಾಡಕಚೇರಿಯಲ್ಲಿ ಈ ಘಟನೆ ನಡೆದಿದೆ. ಜಾತಿ ಹಾಗೂ ಆದಾಯ ಪ್ರಮಾಣಪತ್ರ ಪಡೆಯಲು ಹೋಗಿದ್ದ ಸಾರ್ವಜನಿಕರಿಗೆ ಕರ್ತವ್ಯ ನಿರ್ವಹಿಸುತ್ತಿದ್ದ ಗ್ರೇಡ್​ 2 ತಹಶೀಲ್ದಾರ್ ಇಂದಿರಾ​​ ಆವಾಜ್​​ ಹಾಕಿದ್ದಾರೆ. ಬೆಳಗ್ಗೆ ಸಾರ್ವಜನಿಕರು ಜಾತಿ ಹಾಗೂ ಆದಾಯ ಪ್ರಮಾಣಪತ್ರಕ್ಕಾಗಿ ಕ್ಯೂನಲ್ಲಿ ನಿಂತಿದ್ದರು. ಈ ವೇಳೆ ಕಚೇರಿಯ ಯಂತ್ರದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಕೆಟ್ಟುಹೋಗಿದೆ. ಏನಾಯಿತು ಮೇಡಂ ಎಂದು ಸೌಜ್ಯನ್ಯದಿಂದ ಕೇಳಿದ ಯುವತಿಗೆ ತಹಶೀಲ್ದಾರ್​​, ನಿನೇನಾದ್ರೂ ಸಾಫ್ಟ್​​ವೇರ್​​ ಎಂಜಿನಿಯರ್​​ ಆಗಿದ್ರೆ ಬಂದು ಸರಿ ಮಾಡು ಎಂದು ಅವಾಜ್​ ಹಾಕಿದ್ದಾರೆ. ಅಲ್ಲದೇ ಬ್ಯಾಂಕ್​ನಲ್ಲಿ ಗಂಟೆಗಟ್ಟಲೆ ನಿಲ್ತೀರ. ಇಲ್ಲಿ ನಿಲ್ಲೋಕೆ ಏನು ಎಂದಿದ್ದಾರೆ. ಅಧಿಕಾರಿಣಿಯ ವರ್ತನೆಯನ್ನು ಕಂಡು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv