ತಮಗೆ ಬೇಕಾದ ಅಧಿಕಾರಿಗಳ ವರ್ಗಾವಣೆಗೆ ಮುಂದಾದ್ರಾ ಸಚಿವ ರೇವಣ್ಣ..?

ಮೈಸೂರು: ಲೋಕಸಭೆ ಚುನಾವಣೆ ಸಂದರ್ಭದಲ್ಲಿ ತಮಗೆ ಬೇಕಾದ ಅಧಿಕಾರಿಗಳ ವರ್ಗಾವಣೆಗೆ ಸಚಿವರು ಮುಂದಾಗಿದ್ದಾರಾ? ಹೀಗೊಂದು ಅನುಮಾನ ವ್ಯಕ್ತವಾಗಿದೆ. ಯಾಕಂದ್ರೆ, ಸಚಿವ ರೇವಣ್ಣ ಹಾಗೂ ಜಿ.ಟಿ.ದೇವೇಗೌಡ ಹೆಸರು ಉಲ್ಲೇಖಿಸಿ, ಇಬ್ಬರು ತಹಸೀಲ್ದಾರರು ನಡೆಸಿದ ಸಂಭಾಷಣೆ ಆಡಿಯೋ ಒಂದು ವೈರಲ್ ಆಗಿದೆ.

ಮೈಸೂರು ತಹಸೀಲ್ದಾರ್ ರಮೇಶ್ ಬಾಬು ಹಾಗೂ ತರೀಕೆರೆ ತಹಸೀಲ್ದಾರ್ ರೇಣುಕುಮಾರ್ ನಡುವಿನ ಸಂಭಾಷಣೆ ವೈರಲ್​​ ಆಗಿದೆ. ಸಂಭಾಷಣೆಯಲ್ಲಿ ತಹಸೀಲ್ದಾರ್ ರೇಣುಕುಮಾರ್, ‘ ರೇವಣ್ಣ ಸಾಹೇಬ್ರು ಜಿ.ಟಿ ದೇವೇಗೌಡರಿಗೆ ಹೇಳಿದ್ದಾರೆ. ರೇಣುಕುಮಾರ್ ನಮ್ಮ‌ ಕಾರ್ಯಕರ್ತ ಇದ್ದ ಹಾಗೆ. ರಮೇಶ್ ಬಾಬು ನಿಮ್ಮ ಕೆಲಸ ಮಾಡಿಕೊಡುತ್ತಾರೆ ಅಂತ ಹೇಳಿದ್ದಾರೆ. ನೀನು ಒಮ್ಮೆ ಜಿ.ಟಿ.ದೇವೇಗೌಡ ಜೊತೆ ಮಾತಾಡಿ ಆರ್ಡರ್ ಕೊಡಿಸು ಅಂತಾ ರಮೇಶ್ ಬಾಬುಗೆ ಮನವಿ ಮಾಡಿಕೊಂಡಿದ್ದಾರೆ.

ಈ ಮೊದಲು ರೇಣುಕುಮಾರ್​ಗೆ ಹೊಳೆನರಸೀಪುರದಿಂದ ತರಿಕೇರೆಗೆ ವರ್ಗಾವಣೆ ಆಗಿತ್ತು. ಬಳಿಕ ಅಲ್ಲಿಂದ ರೇಣುಕುಮಾರ್ ಮೈಸೂರಿಗೆ ವರ್ಗಾವಣೆ ಮಾಡಿಸಿಕೊಂಡಿದ್ದರು. ಇದೀಗ ತಹಸೀಲ್ದಾರ್ ಹುದ್ದೆಗೆ ರಮೇಶ್ ಬಾಬು ಮತ್ತು ರೇಣುಕುಮಾರ್ ನಡುವೆ ಫೈಟ್ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ನಾನು ಮೈಸೂರಿಗೆ ಬಂದು ರಿಪೋರ್ಟ್ ಮಾಡ್ಕೊಳ್ತಿನಿ. ನಿನಗೆ ಒಂದು ತಿಂಗಳು ಅವಕಾಶ ಕೊಡ್ತೀನಿ ಏನ್ ಬೇಕಾದ್ರೂ ಮಾಡ್ಕೋ. ಯಾವ ಫೈಲ್ ಬೇಕಾದ್ರೂ ಮೂವ್ ಮಾಡ್ಕೊ ನಾನು ಸಪೋರ್ಟ್ ಮಾಡ್ತೀನಿ. ನಾನು ನೆಪ ಮಾತ್ರಕ್ಕೆ ಇರ್ತೀನಿ ನೀನು ಏನ್ ಬೇಕಾದ್ರೂ ಮಾಡ್ಕೋ. ಒಕ್ಕಲಿಗರಿಗೆ ಒಕ್ಕಲಿಗರು ಸಪೋರ್ಟ್ ಮಾಡದೇ ಬ್ರಾಹ್ಮಣರಿಗೆ ಸಪೋರ್ಟ್ ಮಾಡ್ತೀಯಾ ಅಂತಾ  ರೇಣುಕುಮಾರ್, ರಮೇಶ್​ ಬಾಬುಗೆ ಮನವಿ ಮಾಡಿಕೊಂಡಿದ್ದಾರೆ.

Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv