ರಾಬರ್ಟ್‌ ಎದುರು ಅಬ್ಬರಿಸಲಿದ್ದಾರೆ ಕಾಕ್ರೋಚ್‌!

‘ಟಗರು‘..ನಿರ್ದೇಶಕ ಸುಕ್ಕಾ ಸೂರಿ ನಿರ್ದೇಶನದಲ್ಲಿ ಬಂದ ಬ್ಲಾಕ್ ಬಾಸ್ಟರ್​ ಸಿನಿಮಾ. ಶಿವಣ್ಣ ನಾಯಕನಾಗಿ ನಟಿಸಿದ್ದ ಈ ಸಿನಿಮಾ ಸ್ಯಾಂಡಲ್​ವುಡ್​ನಲ್ಲಿ ಹವಾ ಮಾಡಿತ್ತು. ವಿಶೇಷ ಅಂದ್ರೆ ಚಿತ್ರದ ಪಾತ್ರಗಳು ಭಾರೀ ಹಲ್​ಚಲ್​ ಎಬ್ಬಿಸಿತ್ತು. ಅದ್ರಲ್ಲೂ ಡಾಲಿ ಧನಂಜಯ್, ಕಾಕ್ರೋಚ್​, ಚಿಟ್ಟೆಯ ಪಾತ್ರಗಳನ್ನ ಮರೆಯೋಕೆ ಸಾಧ್ಯನೇ ಇಲ್ಲ.

ಕಾಕ್ರೋಚ್​ಗೆ ಸಿಕ್ತು ರಾಬರ್ಟ್ ಆಫರ್​..!
ಇನ್ನು ಸೂರಿ ಸಿನಿಮಾಗಳು ಅಂದ್ರೆ ಅಲ್ಲಿ ಪ್ರಯೋಗಾತ್ಮಕತೆ ಎದ್ದು ಕಾಣುತ್ತೆ. ಜೊತೆಗೆ ಮಾಸ್​ ಸೀನ್​ಗಳ ಅಬ್ಬರವು ಜೋರಾಗಿಯೇ ಇರುತ್ತೆ. ಸೂರಿ ಹೊಸ ಪ್ರತಿಭೆಗಳನ್ನು ಗುರ್ತಿಸುವಲ್ಲಿ ಎತ್ತಿದ ಕೈ. ವಿಭಿನ್ನ ಪಾತ್ರಗಳಿಂದ ನಟರಿಗೆ ಒಂದೊಳ್ಳೆ ಫ್ಲಾಟ್​ ಫಾಮ್​ ಸೃಷ್ಟಿಸೋ ತಾಕತ್ತಿರೋ ನಿರ್ದೇಶಕ. ಸೂರಿ ಸಿನಿಮಾಗಳಿಂದ ಅದೆಷ್ಟೋ ಜನರು ಹೀರೋಗಳಾಗಿ ಮಿಂಚಿದ್ರೆ , ಇನ್ನಷ್ಟು ಜನರ ಬದುಕು ಕೂಡ ಬದಲಾಗಿದೆ. ಅದ್ರಲ್ಲಿ ಕಾಕ್ರೋಚ್ ಖ್ಯಾತಿಯ ಸುಧೀಂದ್ರ ಕೂಡ ಒಬ್ರು. ಈ ಹಿಂದೆ ಕೆಂಡ ಸಂಪಿಗೆ, ದೊಡ್ಮನೆ ಹುಡ್ಗ , ಕಡ್ಡಿಪುಡಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದ ಸುಧೀರ್ ಟಗರು ಚಿತ್ರದ ಕಾಕ್ರೋಚ್​ ಅನ್ನೋ ನಟೋರಿಯಸ್​​ ಕ್ಯಾರೆಕ್ಟರ್​ನಿಂದಾಗಿ​ ಎಲ್ಲರ ಕಣ್ಮನ ಸೆಳೆದಿದ್ರು. ಚಿತ್ರದಲ್ಲಿ ಡಾಲಿಯ ತಮ್ಮನಾಗಿ ಅತಿ ಭಯಂಕರವಾದ ಪಾತ್ರದಲ್ಲಿ ಸುಧೀಂದ್ರ ಮಿಂಚಿದ್ರು. ಇದೀಗ ರಾಬರ್ಟ್​ ಚಿತ್ರತಂಡದಿಂದ ಬಿಗ್ ಆಫರ್​ ಒಂದು ಒಲಿದು ಬಂದಿದೆ.

ರಾಬರ್ಟ್​ಗೆ ವಿಲನ್ ‘ಕಾಕ್ರೋಚ್’​..!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ತರುಣ್ ಸುಧೀರ್ ಕಾಂಬಿನೇಷನ್​ನಲ್ಲಿ ಸೆಟ್ಟೇರಿರುವ ಬಹುನಿರೀಕ್ಷಿತ ರಾಬರ್ಟ್​​ ಚಿತ್ರದಲ್ಲಿ ನಟಿಸೋಕೆ ಸುಧೀಂದ್ರಗೆ ಆಫರ್ ಒಂದು ಒಲಿದು ಬಂದಿದೆ. ದರ್ಶನ್ ಎದುರು ಕಾಕ್ರೋಚ್‌ ಸೆಣಸಾಟ ನಡೆಸಲಿದ್ದಾರೆ. ಸದ್ಯ ರಾಬರ್ಟ್ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಮೇ.18 ರಿಂದ ಶೂಟಿಂಗ್​ನಲ್ಲಿ ಭಾಗಿಯಾಗಲಿದ್ದಾರೆ. ಇದೊಂದು ಬಿಗ್ ಬಜೆಟ್ ಸಿನಿಮಾವಾಗಿದ್ದು ಈಗಾಗಲೇ ತೆಲುಗಿನ ಜಗಪತಿಬಾಬು ಎಂಟ್ರಿ ಕೊಟ್ಟಿದ್ದು ಮತ್ತಷ್ಟು ಬಿಗ್ ಸ್ಟಾರ್ ಚಿತ್ರತಂಡ ಸೇರ್ಪಡೆಯಾಗಲಿದ್ದಾರೆ.