ಹಲ್ಲಿನ ಡಾಕ್ಟರ್ ಬಾಯಲ್ಲೇ ಸೂಜಿ ಮುರಿದ ಡೆಂಟಿಸ್ಟ್..!

ಧಾರವಾಡ: ಹಲ್ಲು ನೋವಿಗೆ ಚಿಕಿತ್ಸೆ ಪಡೆಯಲು ಬಂದಿದ್ದ ಮಹಿಳೆಗೆ ವೈದ್ಯ ಹಲ್ಲಿನಲ್ಲಿ ಸೂಜಿ ಚುಚ್ಚುವಾಗ ಅರ್ಧಕ್ಕೆ ನಿಲ್ಲಿಸಿ ಎಸ್ಕೇಪ್ ಆಗಿದ್ದಾನೆ. ಧಾರವಾಡದಲ್ಲಿ ಘಟನೆ ನಡೆದಿದ್ದು, ತನೆಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರ ವಿರುದ್ಧ ಮಹಿಳೆ ಆರೋಪಿಸಿದ್ದಾರೆ. ವಿಚಿತ್ರ ಅಂದರೆ, ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಕೂಡ ಹಲ್ಲಿನ ವೈದ್ಯರೇ. ಹಲ್ಲಿನ ಸಮಸ್ಯೆಯಿಂದ ಬಳಲುತ್ತಿದ್ದ ಡಾ. ಶಾರಿಕ, ಚಿಕಿತ್ಸೆಗೆಂದು ಖಾಸಗಿ ಫ್ಯಾಮಿಲಿ ಡೆಂಟಲ್ ಕ್ಲೀನಿಕ್​ನ ಡಾ. ವಿನಾಯಕ ಮಹೇಂದ್ರಕರ್ ಬಳಿ ಬಂದಿದ್ದಾರೆ. ಟ್ರೀಟ್ಮೆಂಟ್ ವೇಳೆ, ಹಲ್ಲಿನಲ್ಲಿ ಹಾಕಿದ್ದ ಸೂಜಿ ಅರ್ಧ ಮುರಿದಿದೆ. ಇದರಿಂದ ಗಾಬರಿಗೊಂಡ ಡಾ. ವಿನಾಯಕ್ ಮುರಿದ ಸೂಜಿಯನ್ನೂ ಹೊರಗೆ ತೆಗೆಯದೇ ಪರಾರಿಯಾಗಿದ್ದಾನೆ. ಈ ಬಗ್ಗೆ ಡಾ. ವಿನಾಯಕ್ ವಿರುದ್ಧ ಡಾ. ಶಾರಿಕ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv