ಬಿಗ್‌ ಬಿ ಬರ್ತ್‌ಡೇಗೆ, ‘ಸೈ ರಾ’ ಚಿತ್ರತಂಡದ ಗಿಫ್ಟ್ !

ಇವತ್ತು ಬಿಟೌನ್‌ ಬಿಗ್ ಬಿ ಅಮಿತಾಬ್‌ ಬಚ್ಚನ್ ಅವರ 76ನೇ ಹುಟ್ಟುಹಬ್ಬ. ಇದೇ ಖುಷಿಗೆ ಸೈ ರಾ ನರಸಿಂಹರೆಡ್ಡಿ ಚಿತ್ರತಂಡ ಬಿಗ್‌ಬಿಗೆ ಬರ್ತ್‌ಡೇ ಸರ್ಪೈಸ್ ಗಿಫ್ಟ್ ಕೊಟ್ಟಿದ್ದು, ಚಿತ್ರದಲ್ಲಿನ ಅಮಿತಾಬ್‌ ಫಸ್ಟ್‌ ಲುಕ್‌ ರಿವೀಲ್ ಮಾಡಿದೆ.

ಹುಟ್ಟುಹಬ್ಬದ ಶುಭಾಶಯಗಳು ಅಮಿತಾಬ್‌ ಜೀ ಅಂತಾ ಶುಭಾಶಯ ಕೋರಿದೆ ಚಿತ್ರತಂಡ. ಚಿತ್ರದಲ್ಲಿ ನರಸಿಂಹರೆಡ್ಡಿಯಾಗಿರೋ ಮೆಗಾಸ್ಟಾರ್ ಚಿರಂಜೀವಿ ಗುರುಗಳಾಗಿ ಗೋಸಾಯಿ ವೆಂಕಣ್ಣ ಪಾತ್ರದಲ್ಲಿ ಬಚ್ಚನ್​​​​ ಅಭಿನಯಿಸುತ್ತಿದ್ದಾರೆ. ಫಸ್ಟ್‌ಲುಕ್‌ನಲ್ಲಿ, ತೇಜಸ್ಸು ತುಂಬಿರೋ ಕಣ್ಗಳಲ್ಲಿ ಗಂಭೀರವದನರಾಗಿ ನೋಡುತ್ತಿರೋ ಬಿಗ್‌ ಬಿ, ಪಾತ್ರಕ್ಕೆ ಕಳೆಕಟ್ಟೋದ್ರಲ್ಲಿ ನೋ ಡೌಟ್.

ಈ ಹಿಂದೆ ಅಮಿತಾಬ್‌ ತಮ್ಮ ಪಾತ್ರದ ಚಿತ್ರೀಕರಣದ ವೇಳೆಯಲ್ಲಿ ಕೆಲ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ರು. ಆದ್ರೆ ಯಾವ ಪಾತ್ರ ಹೇಗಿರುತ್ತೆ ಅನ್ನೋದು ಸ್ವಷ್ಟವಾಗಿ ಗೊತ್ತಾಗಿರಲಿಲ್ಲ. ಇನ್ನು ಅಮಿತಾಬ್‌ ಬಗ್ಗೆ ಹೇಳೋದೆ ಬೇಡ. ವಯಸ್ಸು ಆಗ್ತಾಯಿದ್ಯೋ ಅಥ್ವಾ ಇನ್ನೂ ಯೌವ್ವನಕ್ಕೆ ಉಲ್ಟಾ ಮರಳುತ್ತಿದ್ದಾರೋ ಅನ್ನುವಷ್ಟು ಜೀವನೋತ್ಸಾಹ ತುಂಬಿರೋ ಬಿಗ್‌ ಬಿ ಅಭಿನಯದ ಇನ್ನೊಂದು ಸಿನಿಮಾ ಥಗ್ಸ್ ಆಫ್ ಹಿಂದೋಸ್ತಾನ್. ಈ ಚಿತ್ರದ ಟೀಸರ್‌ ಇತ್ತೀಚೆಗಷ್ಟೇ ರಿಲೀಸ್ ಆಗಿತ್ತು. ಇದ್ರಲ್ಲೂ ಅಮಿತಾಬ್‌ ನೋಡಿ ಎಲ್ರೂ ಫಿದಾ ಆಗಿದ್ರು. ಈಗ ಬರ್ತ್‌ಡೇಗೆ ಬಿಗ್‌ಬಿ ಅಭಿಮಾನಿಗಳಿಗೆ ಟ್ರೀಟ್‌ ಸಿಕ್ಕಂತಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv