ಸೈ.ರಾ ಚಿತ್ರತಂಡ ಸೂಪರ್‌- ಕಿಚ್ಚ

ಸೈ. ರಾ. ನರಸಿಂಹರೆಡ್ಡಿ ಚಿತ್ರದಲ್ಲಿ ಕಿಚ್ಚ ಸುದೀಪ್ ಅವುರು ರಾಜ್ಯದ ರಾಜನಾಗಿ ಅಭಿನಯಿಸ್ತಿರೋದು ಗೊತ್ತೇ ಇದೆ. ಸದ್ಯ ಚಿತ್ರದ ವಾರ್ ಸೀಕ್ವೆನ್ಸ್‌ವೊಂದ್ರ ಮೇಕಿಂಗ್ ದೂರದ ಜಾರ್ಜಿಯಾದಲ್ಲಿ ನಡೀತಿದ್ದು ಕಿಚ್ಚ ಇತ್ತೀಚೆಗಷ್ಟೇ ಚಿತ್ರತಂಡ ಸೇರಿ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಚಿತ್ರತಂಡದ ಕೆಲಸದ ಬಗ್ಗೆ, ನಿರ್ದೇಶಕ ಸುರೇಂದರ್ ರೆಡ್ಡಿ ಬಗ್ಗೆ, ಅವರ ಆತಿಥ್ಯದ ಬಗ್ಗೆ ದಿಲ್‌ಖುಷ್ ಆಗಿರೋ ಕಿಚ್ಚ ಟ್ವಿಟರ್‌ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಂದ್ಹಾಗೆ ಸುಮಾರು ₹ 50 ಕೋಟಿಗೂ ಹೆಚ್ಚು ಖರ್ಚು ಮಾಡಿ ಇದೊಂದು ಸೀನ್‌ನೇ ಶೂಟ್ ಮಾಡಲಾಗುತ್ತಿದೆ. 2300 ಕ್ಕೂ ಹೆಚ್ಚು ಕಲಾವಿದರ, ತಂತ್ರಜ್ಞರ ತಂಡ ಜಾರ್ಜಿಯಾದಲ್ಲಿ ಬೀಡುಬಿಟ್ಟಿದೆ. ಇಷ್ಟೆಲ್ಲಾ ದೊಡ್ಡ ತಂಡವಿದ್ರೂ ಎಲ್ಲವೂ ಅಚ್ಚುಕಟ್ಟಾಗಿ ಗೊಂದಲವಿಲ್ಲದೆ ಸರಾಗವಾಗಿ ಟೈಮ್ ಮ್ಯಾನೇಜ್‌ ಮಾಡ್ತಿರೋ ಟೀಮ್ ಹಿಂದೆ ನಿರ್ದೇಶಕರಿದ್ದಾರೆ. ತುಂಬಾ ಸ್ವೀಟ್ ಆದ ಮಂದಿಯ ಜೊತೆ ಕೆಲಸ ಮಾಡ್ತಿದ್ದೀನಿ. ಎಲ್ಲವೂ ಸೂಪರ್ ಅಂತಾ ಹೊಗಳಿದ್ದಾರೆ.
ಇತ್ತೀಚೆಗಷ್ಟೇ ಈ ಸೀಕ್ವೆನ್ಸ್‌ ಶೂಟಿಂಗ್ ಸಮಯದಲ್ಲಿ ಕಿಚ್ಚ ಹಾಗೂ ತಮಿಳು ಸೂಪರ್‌ಸ್ಟಾರ್ ವಿಜಯ್‌ ಸೇತುಪತಿ ಜೊತೆಗಿರೋ ಫೋಟೋ ರಿವೀಲ್ ಆಗಿದ್ದು ಸುದೀಪ್ ಲುಕ್‌ ಇನ್ನಷ್ಟು ಕ್ಯೂರಿಯಾಸಿಟಿ ಹುಟ್ಟಿಸಿದೆ. ಸುಮಾರು ₹ 150 ಕೋಟಿಗೂ ಅಧಿಕ ಬಜೆಟ್ ಚಿತ್ರ ಎನ್ನಲಾಗುತ್ತಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv