ಲಿಂಗಾಯಿತ ಸ್ವಾಮಿಗಳಿಂದ ತುಮಕೂರು ಶಾಸಕರ ಸಚಿವ ಸ್ಥಾನಕ್ಕಾಗಿ ಒತ್ತಾಯ..?

ಬೆಂಗಳೂರು: ಸಚಿವ ಸ್ಥಾನಕ್ಕಾಗಿ ಶಾಸಕರ ಪೈಪೋಟಿ ಇನ್ನೂ ಮುಗಿದಿಲ್ಲ. ಅಲ್ಲದೆ, ಶಾಸಕರ ಪರವಾಗಿ ಮಠಾಧೀಶರುಗಳು ಪಕ್ಷದ ವರಿಷ್ಠರ ಮೇಲೆ ಒತ್ತಡ ತರುತ್ತಿದ್ದಾರೆ. ಈ ಹಿನ್ನೆಲೆ, ದೇವೇಗೌಡರ ಪದ್ಮನಾಭನಗರ ನಿವಾಸಕ್ಕೆ ಲಿಂಗಾಯತ ಸ್ವಾಮೀಜಿಗಳ ದಂಡೇ ಆಗಿಮಿಸಿತ್ತು. ದೇವೇಗೌಡರ ಮನೆಗೆ ಆಗಮಿಸಿದ ತುಮಕೂರಿನ ‘ಕೆಲ ಮಠ’ ಮತ್ತು ‘ನೆಲಮಂಗಲ ಮಠ’ದ ಒಟ್ಟು ಐದಾರು ಸ್ವಾಮೀಜಿಗಳು ದೇವೆಗೌಡರ ಜೊತೆ ಚರ್ಚೆ ಮಾಡಲು ಬಂದಿದ್ದರು ಎನ್ನಲಾಗಿದೆ. ಸ್ವಾಮೀಜಿಗಳು, ತುಮಕೂರು ಶಾಸಕರಿಗೆ ಸಚಿವ ಸ್ಥಾನ ಕೊಡಬೇಕೆಂದು ಒತ್ತಾಯ ಮಾಡಿದ್ದಾರೆ ಎನ್ನಲಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv