‘ಸ್ವಾಮೀಜಿಗಳಿಗೆ ರೈತರ ಕಷ್ಟ.. ನೋವುಗಳ ಬಗ್ಗೆ ಅರಿವಿಲ್ಲ..’

ಬಾಗಲಕೋಟೆ: ನಿಜಗುಣಾನಂದ ಸ್ವಾಮೀಜಿಯ ನಾಲಿಗೆ ಶುದ್ದವಿಲ್ಲ. ಅವರು ಇಡೀ ರೈತ ಕುಲಕ್ಕೆ ಅಪಮಾನ ಮಾಡಿದ್ದಾರೆ ಅಂತಾ ಧಾರವಾಡದ ಮನ್ಸೂರು ಮಠದ ಬಸವರಾಜದೇವರು ಸ್ವಾಮೀಜಿ ತಿರುಗೇಟು ನೀಡಿದ್ದಾರೆ.
ವಿಡಿಯೋ ಒಂದರಲ್ಲಿ ಮಾತನಾಡಿರುವ ಅವರು, ರೈತ ವಿರೋಧಿ ಹೇಳಿಕೆ ನೀಡುವ ಮೂಲಕ ಸ್ವಾಮಿಜಿ ತಾವು ಉಣ್ಣುವ ಅನ್ನಕ್ಕೆ ಮಹಾದ್ರೋಹ ಬಗೆದಿದ್ದಾರೆ ಎಂದರು. ರೈತರು ಸಾಲದಿಂದ ಆತ್ಮಹತ್ಯೆ ಮಾಡಿಕೊಳ್ತಿದ್ದಾರೆ. ಆದರೆ ನಿಜಗುಣಾನಂದ ಸ್ವಾಮೀಜಿ ರೈತರು ಇಸ್ಪೀಟ್, ಜೂಜು, ಮೋಜು ಮಸ್ತಿ ಹಾಗೂ ಮದ್ಯವ್ಯಸನದಿಂದ ಸಾಲ ಮಾಡಿದ್ದಾರೆ ಅಂತಾರೆ ಎಂದರು.
ಆಚಾರಶೀಲರಾಗಿ ಧಾರ್ಮಿಕ ಮುಖಂಡರಾಗಿ ಈ ರೀತಿ ಮಾತಾಡೋದು ಅಪರಾಧ. ನಿಜಗುಣಾನಂದ ಶ್ರೀ ಬಸವಧರ್ಮೀಯರು. ಬಸವಧರ್ಮಕ್ಕೆ ಇದು ವಿರೋಧ ಕ್ರಮ. ಸ್ವಾಮೀಜಿಗಳಿಗೆ ರೈತರ ಕಷ್ಟ, ನೋವುಗಳ ಬಗ್ಗೆ ಅರಿವಿಲ್ಲ. ರೈತರು, ಮಹಿಳೆಯರ, ಬಡವರ ಕಷ್ಟಗಳ ಬಗ್ಗೆ ಸ್ವಾಮೀಜಿಗಳಿಗೆ ಅರಿವು ಇರಬೇಕು ಎಂದಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv