ಸಿದ್ದಗಂಗಾ ಶ್ರೀಗಳ ಆರೋಗ್ಯ ವಿಚಾರಿಸಿದ ಸುತ್ತೂರು ಶ್ರೀಗಳು

ತುಮಕೂರು: ಸಿದ್ದಗಂಗಾ ಶ್ರೀಗಳ ಆರೋಗ್ಯವನ್ನು ವಿಚಾರಿಸಲು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಇಂದು ಸಿದ್ದಗಂಗಾ ಆಸ್ಪತ್ರೆಗೆ ಭೇಟಿ ನೀಡಿದರು. ಶ್ರೀಗಳ ಆರೋಗ್ಯ ವಿಚಾರಿಸಿದ ಬಳಿಕ ಮಾತನಾಡಿದ ಅವರು, ಸಿದ್ದಗಂಗಾ ಶ್ರೀಗಳಿಗೆ ವೈದ್ಯರು ಒಳ್ಳೆಯ ರೀತಿಯಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಉಸಿರಾಟದ ತೊಂದರೆ ಇರುವುದರಿಂದಾಗಿ ಶ್ರೀಗಳಿಗೆ ಕೃತಕವಾಗಿ ಉಸಿರಾಟ ನೀಡಲಾಗುತ್ತದೆ. ಸಹಜವಾಗಿಯೂ ಉಸಿರಾಡುತ್ತಿದ್ದಾರೆ. ಇನ್ನೆಲ್ಲಾ ಪ್ಯಾರಾಮೀಟರ್ ಚೆನ್ನಾಗಿದೆ. ನಿಶ್ಯಕ್ತಿ ಕಾರಣದಿಂದ ಅವರು ಉಸಿರಾಡಲು ಕಷ್ಟ ಆಗುತ್ತಿದೆ. ಶ್ರೀಗಳು ಮಲಗಿದ್ದರು ಹಾಗಾಗಿ ನಾವು ಮಾತನಾಡಿಸಲು ಹೋಗಿಲ್ಲ ಎಂದು ಸುತ್ತೂರು ಶ್ರೀಗಳು ಹೇಳಿದರು.