ಶೀಲ ಶಂಕಿಸಿ, ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ ದುರುಳ ಪತಿ, ಅತ್ತೆ, ಮಾವ..!

ಕಲಬುರ್ಗಿ: ಪತ್ನಿಯ ಶೀಲ ಶಂಕಿಸಿ ಆಕೆಯ ಪತಿ, ಅತ್ತೆ, ಮಾವ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆಳಂದ ತಾಲೂಕಿನ ಕೊಡಲ ಹಂಗರಗಾ ಗ್ರಾಮದಲ್ಲಿ ಶಾರದಾಬಾಯಿ ಪಾಲಕೆನವರ್ (20) ಶೀಲದ ಮೇಲೆ ಅನುಮಾನ ಪಟ್ಟು ಆಕೆಯ ಗಂಡ ‌ವಿರೇಶ್, ಮಾವ ಗುಂಡಪ್ಪ, ಅತ್ತೆ ನಿಲಮ್ಮ ಅವರುಗಳು ನಿನ್ನೆ ಆಕೆಯ ಮೇಲೆ ಸೀಮೆಎಣ್ಣೆ ಸುರಿದು, ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ.

ಬೆಂಕಿಯಿಂದ ಗಾಯಗೊಂಡಿದ್ದ ಶಾರದಾಬಾಯಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಅವರು ಇಂದು ಮೃತಪಟ್ಟಿದ್ದಾರೆ. ಈ ಕುರಿತು ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.