ದ್ರೌಪದಿ ವಸ್ತ್ರಾಪಹರಣವಾಗ್ತಿದೆ, ಭೀಷ್ಮನಂತೆ ಸುಮ್ಮನಿರಬೇಡಿ: ಅಜಂ ವಿರುದ್ಧ ಸಿಡಿದ ಸುಷ್ಮಾ

ನವದೆಹಲಿ: ನಟಿ, ಬಿಜೆಪಿ ಅಭ್ಯರ್ಥಿ ಜಯಪ್ರದಾ ಬಗ್ಗೆ ಕೀಳುಮಟ್ಟದ ಹೇಳಿಕೆ ನೀಡಿದ ಸಮಾಜವಾದಿ ಪಕ್ಷದ ಲೋಕಸಭಾ ಅಭ್ಯರ್ಥಿ ಅಜಂ ಖಾನ್​​​ ವಿರುದ್ಧ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಗರಂ ಆಗಿದ್ದಾರೆ. ಅಜಂ ಖಾನ್​​ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್​​​​ ಯಾದವ್​ ಹಾಗೂ ಅವರ ಪತ್ನಿ ಡಿಂಪಲ್​​ ಯಾದವ್​​ಗೆ ಸುಷ್ಮಾ ಸ್ವರಾಜ್ ಆಗ್ರಹಿಸಿದ್ದಾರೆ.

ಜಯಪ್ರದಾ ಅವರ ಸ್ಥಿತಿಯನ್ನು ದ್ರೌಪದಿ ವಸ್ತ್ರಾಪಹರಣಕ್ಕೆ ಹೋಲಿಸಿ ಟ್ವೀಟ್​​ ಮಾಡಿರೋ ಸುಷ್ಮಾ ಸ್ವರಾಜ್​​, ಮುಲಾಯಮ್​ ಅಣ್ಣ, ನೀವು ಸಮಾಜವಾದಿ ಪಕ್ಷದ ಪಿತಾಮಹ. ನಿಮ್ಮ ಮುಂದೆ ರಾಮ್​​ಪುರ್​​ನ ದ್ರೌಪದಿಯ(ಜಯಪ್ರದಾ) ವಸ್ತ್ರಾಪಹರಣವಾಗುತ್ತಿದೆ. ಭೀಷ್ಮನಂತೆ ಮೌನವಾಗಿದ್ದು, ತಪ್ಪು ಮಾಡಬೇಡಿ ಎಂದು ಹೇಳಿದ್ದಾರೆ. ಅಖಿಲೇಶ್​​ ಯಾದವ್​, ಜಯಾ ಬಾದುರಿ ಹಾಗೂ ಡಿಂಪಲ್​​ ಯಾದವ್​​ಗೆ ಈ ಟ್ವೀಟ್​ ಟ್ಯಾಗ್ ಮಾಡಿದ್ದಾರೆ.

ರಾಮ್​​​ಪುರ್​​​ನಲ್ಲಿ ಚುನಾವಣಾ ಪ್ರಚಾರದ ವೇಳೆ ಸಮಾಜವಾದಿ ಪಕ್ಷದ ಅಧ್ಯಕ್ಷ ಹಾಗೂ ಮಾಜಿ ಸಿಎಂ ಅಖಿಲೇಶ್ ಯಾದವ್ ಸಮ್ಮುಖದಲ್ಲೇ ಮಾತನಾಡಿದ್ದ ಅಜಂ ಖಾನ್, ” ಜಯಪ್ರದಾ ತೊಡುವ ಅಂಡರ್​ವೇರ್​ ಕೂಡ ಖಾಕಿ ಬಣ್ಣದ್ದು” ಎಂದು ಕೀಳುಮಟ್ಟದಲ್ಲಿ ಮಾತನಾಡಿದ್ದರು. ತಮ್ಮ ಎದುರಲ್ಲೇ ಅಜಂ ಖಾನ್ ಈ ರೀತಿ ಕೀಳು ಮಟ್ಟದಲ್ಲಿ ನಾಲಿಗೆ ಹರಿ ಬಿಡುತ್ತಿದ್ದರೂ, ಅಖಿಲೇಶ್ ಯಾದವ್ ಮಾತ್ರ ತುಟಿ ಬಿಚ್ಚಲಿಲ್ಲ. ಅಜಂ ಖಾನ್ ನಂತರ ಅದೇ ವೇದಿಕೆಯಲ್ಲಿ ಅಖಿಲೇಶ್ ರಾಜಕೀಯ ಭಾಷಣ ಮಾಡಿದ್ರು. ಆದ್ರೆ, ಅಜಂ ಖಾನ್ ಹೇಳಿಕೆ ಬಗ್ಗೆ ಮಾತ್ರ ಒಂದೇ ಒಂದು ಮಾತನಾಡದಿರುವುದು ಈಗ ಆಕ್ರೋಶಕ್ಕೆ ಕಾರಣವಾಗಿದೆ. ಅಜಂ ಖಾನ್ ಹೇಳಿಕೆಗೆ ರಾಜಕೀಯ ವಲಯದಲ್ಲಿ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ. ರಾಮ್​​ಪುರ್​ನಲ್ಲಿ ಅಜಂ ಖಾನ್ ವಿರುದ್ಧ ಕೇಸ್​ ದಾಖಲಾಗಿದ್ದು, ರಾಷ್ಟ್ರೀಯ ಮಹಿಳಾ ಆಯೋಗ ಕೂಡ ಖಾನ್ ವಿರುದ್ಧ ಕ್ರಮಕ್ಕೆ ಮುಂದಾಗಿದೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv