ಯಲಹಂಕ ವಿಮಾನ ಅಪಘಾತ: ಮನೆ ಮೇಲೆಯೇ ಬಿತ್ತು ಎಂದು ಗಾಬರಿ ಪಟ್ಟ ಸ್ಥಳೀಯರು

ಬೆಂಗಳೂರು: ನಾಳೆಯಿಂದ ಐದು ದಿನಗಳ ಕಾಲ ಏರೋ ಶೋ ನಡೆಯಲಿದೆ. ಈ ಹಿನ್ನೆಲೆಯಲ್ಲಿ ತಮ್ಮ ಚಾಕಚಕ್ಯತೆಯನ್ನು ಪ್ರದರ್ಶಿಸಲು ನೂರಾರು ಪೈಲಟ್​ಗಳು ಸಿದ್ಧತೆ ನಡೆಸಿದ್ದಾರೆ. ಇದೇ ಹಿನ್ನೆಲೆಯಲ್ಲಿ ಇಂದು ಎರಡು ಸೂರ್ಯಕಿರಣ ಲಘು ಯುದ್ಧ ವಿಮಾನಗಳು ಪ್ರಾಕ್ಟೀಸ್​ ಮಾಡುತ್ತಿದ್ದವು. ಏ ವೇಳೆ ಇವುಗಳ ಮಧ್ಯೆ ಡಿಕ್ಕಿ ಸಂಭವಿಸಿ ಯಲಹಂಕ ಬಳಿ ಎರಡೂ ವಿಮಾನಗಳು ಪತನಗೊಂಡಿವೆ. ಈ ವೇಳೆ ಎರಡೂ ವಿಮಾನಗಳ ಇಬ್ಬರೂ ಪೈಲಟ್​ಗಳು ಇಜೆಕ್ಟ್ ಆಗಿದ್ದಾರೆ. ಆದ್ರೆ, ವಿಮಾನಗಳು ನೆಲಕ್ಕೆ ಅಪ್ಪಳಿಸಿದ ರಭಸಕ್ಕೆ ಸ್ಥಳೀಯರು ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ. ಮಾಧ್ಯಮದೊಂದಿಗೆ ಮಾತನಾಡಿದ ಸ್ಥಳೀಯ ಗೃಹಿಣಿಯೊಬ್ಬರು, ‘ಇಂದು ಬೆಳಗ್ಗೆ ಸುಮಾರು 11.30ನಿಮಿಷಕ್ಕೆ ಈ ಅಪಘಾತ ಸಂಭವಿಸಿದೆ. ಈ ವೇಳೆ ನಾವು ಮನೆಯಲ್ಲಿ ನಮ್ಮ ದೈನಂದಿನ ಕೆಲಸದಲ್ಲಿ ಇದ್ವಿ. ಆಗ ತುಂಬಾ ದೊಡ್ಡ ಶಬ್ದದೊಂದಗಿಗೆ ವಿಮಾನ ನೆಲಕ್ಕೆ ಅಪ್ಪಳಿಸಿವೆ. ಈ ಶಬ್ದ ಕೇಳಿದ ನಾವು, ನಮ್ಮ ಮನೆ ಮೇಲೆಯೇ ವಿಮಾನ ಬಿತ್ತು ಎಂದು ಭಾವಿಸಿ ಹೊರಗೆ ಓಡಿ ಬಂದೆವು. ಆಗ ತುಂಬಾ ಬಿಸಿಗಾಳಿ ನಮ್ಮನ್ನು ತಾಕಿತು, ಅಲ್ಲದೇ ಹತ್ತಿರದಲ್ಲೇ ವಿಮಾನ ಉರಿಯುತ್ತಿದ್ದುದು ನೋಡಿ ನಾವು ನಡುಗಿ ಹೋದೆವು’ ಎಂದು ಹೇಳಿದ್ದಾರೆ.


Follow us on:

YouTube: firstNewsKannada Instagram: firstnews.tv Facebook: firstnews.tv Twitter: firstnews.tv