ಹೈದರಾಬಾದ್: ವೈದ್ಯರ ಯಡವಟ್ಟಿನ ಬಗ್ಗೆ ಸಾಕಷ್ಟು ಸುದ್ದಿಗಳು ವರದಿಯಾಗುತ್ತಲೇ ಇರುತ್ತವೆ. ಹೈದರಾಬಾದ್ನ ಪ್ರತಿಷ್ಠಿತ ಆಸ್ಪತ್ರೆಯೊಂದರ ವೈದ್ಯರು ಆಪರೇಷನ್ಗೆ ಬಳಸಿದ ಫೊರ್ಸೆಪ್ಸ್ ಅನ್ನ ರೋಗಿಯ ಹೊಟ್ಟೆಯೊಳಗೆ ಬಿಟ್ಟು ಮಹಾ ಯಡವಟ್ಟು ಮಾಡಿದ್ದಾರೆ. ಇಲ್ಲಿನ ನಿಜಾಮ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್(NIMS) ಆಸ್ಪತ್ರೆಯಲ್ಲಿ ಮೂರು ತಿಂಗಳ ಹಿಂದೆ 31 ವರ್ಷದ ಮಹಿಳೆಯೊಬ್ಬರು ಹರ್ನಿಯಾ ಆಪರೇಷನ್ ಮಾಡಿಸಿಕೊಂಡಿದ್ದರು. ಬಳಿಕ ಅವರಿಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಳ್ತಿತ್ತು. ಈ ಹಿನ್ನೆಲೆ ಅವರು ಮತ್ತೆ ಆಸ್ಪತ್ರೆಗೆ ಬಂದು ಚೆಕಪ್ ಮಾಡಿಸಿದ್ದಾರೆ. ನಿನ್ನೆ ಎಕ್ಸ್-ರೇ ರಿಪೋರ್ಟ್ ಬಂದಾಗ ಹೊಟ್ಟೆನೋವಿಗೆ ಕಾರಣವೇನೆಂಬುದು ಬಯಯಲಾಗಿದೆ. ಮಹಿಳೆಯ ಹೊಟ್ಟೆಯಲ್ಲಿ ಫೋರ್ಸೆಪ್ಸ್ ಇರುವುದು ಎಕ್ಸ್-ರೇ ರಿಪೋರ್ಟ್ನಿಂದ ಗೊತ್ತಾಗಿದೆ. ಆಪರೇಷನ್ ವೇಳೆ ವೈದ್ಯರು ಮಹಿಳೆಯ ಹೊಟ್ಟೆಯೊಳಗೆ ಫೋರ್ಸೆಪ್ಸ್ ಬಿಟ್ಟು ನಿರ್ಲಕ್ಷ್ಯ ತೋರಿದ್ದಾರೆ. ಮಹಿಳೆಯ ಹೊಟ್ಟೆಯಿಂದ ಫೋರ್ಸೆಪ್ಸ್ ಹೊರತೆಗೆಯಲು ಇಂದು ಬೆಳಗ್ಗೆ ಆಪರೇಷನ್ ಮಾಡಲಾಗಿದೆ. ಘಟನೆ ಹಿನ್ನೆಲೆ ತನಿಖೆ ನಡೆಸಲು ಆಸ್ಪತ್ರೆ ಸಮಿತಿಯೊಂದನ್ನ ರಚಿಸಿದೆ ಎಂದು NIMS ನಿರ್ದೇಶಕ ಕೆ. ಮನೋಹರ್ ಹೇಳಿದ್ದಾರೆ. ಪೊಲೀಸರು ಕೂಡ ಈ ಬಗ್ಗೆ ತನಿಖೆ ಮಾಡುತ್ತಿದ್ದಾರೆ. ಗ್ರಾಹಕರ ನ್ಯಾಯಾಲಯವೂ ಕೂಡ ಪ್ರಕರಣವನ್ನು ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.
Follow us on:
YouTube: firstNewsKannada Instagram: firstnews_tv Face Book: firstnews.tv Twitter: firstnews_tv