ನಂಜನಗೂಡು ನಗರಸಭೆ ಚುನಾವಣೆ: ಆಪ್ತನ ಪರ ಸುರೇಶ್ ಕುಮಾರ್ ಮತಯಾಚನೆ

ಮೈಸೂರು: ಲೋಕಸಮರ ಮುಗಿಯುತ್ತಿದ್ದಂತೆ ನಾಯಕರು ಮಿನಿ ಸಮರಕ್ಕೆ ಸಜ್ಜಾಗುತ್ತಿದ್ದಾರೆ. ನಂಜನಗೂಡು ಪುರಸಭೆ ಗದ್ದುಗೆ ಹಿಡಿಯಲು ಪಕ್ಷಗಳು ತಂತ್ರ ರೂಪಿಸಿವೆ. ಮಾಜಿ ಸಂಸದ ಆರ್.ಧೃವನಾರಾಯಣ್ ತಮ್ಮ ಸೋಲನ್ನು ಲೆಕ್ಕಿಸದೆ ಪ್ರಚಾರಕ್ಕೆ ಇಳಿದಿದ್ದರು. ಇದರ ಬೆನ್ನಲ್ಲೇ ಬಿಜೆಪಿ ಶಾಸಕ ಸುರೇಶ್ ಕುಮಾರ್ ಸಹ ನಂಜನಗೂಡು ನಗರಸಭೆ ಚುನಾವಣೆಯ  ಪ್ರಚಾರ ಕಣಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಮೋದಿ ಅಲೆಯನ್ನ ಬಂಡವಾಳ ಮಾಡಿಕೊಳ್ಳಲು ಬಿಜೆಪಿ ಸನ್ನದ್ಧವಾಗಿದ್ದು, ಸುರೇಶ್ ಕುಮಾರ್ ತನ್ನ ಆಪ್ತ ಕಪಿಲೇಶ್ವರ್ ಪರ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಕಪಿಲೇಶ್ವರ್ ನಾಲ್ಕನೇ ವಾರ್ಡಿನಲ್ಲಿ ಬಿಜೆಪಿ ಪ್ರತಿನಿಧಿಸುತ್ತಿದ್ದಾರೆ. ಹೀಗಾಗಿ ಸುರೇಶ್ ಕುಮಾರ್ ಅವರು ಮನೆ ಮನೆಗೆ ತೆರಳಿ ಕರಪತ್ರ ಹಂಚುವ ಮೂಲಕ ಮತಯಾಚಿಸಿದ್ದಾರೆ. ನಗರಸಭೆಯ 31 ವಾರ್ಡ್​ಗಳ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವಂತೆ ಕಾರ್ಯಕರ್ತರಗೆ ಮನವಿ ಮಾಡಿದ್ದಾರೆ.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv