ಎಸ್‌ಸಿ, ಎಸ್‌ಟಿ ಸರ್ಕಾರಿ ನೌಕರರಿಗೆ ಬಡ್ತಿ ಕೇಸ್‌ನಲ್ಲಿ ಮಧ್ಯಂತರ ಆದೇಶವಿಲ್ಲ

ನವದೆಹಲಿ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸರ್ಕಾರಿ ನೌಕರರಿಗೆ ಬಡ್ತಿ ನೀಡುವ ವಿಚಾರವಾಗಿ ಮಧ್ಯಂತರ ಆದೇಶ ನೀಡಲು ಸುಪ್ರೀಂಕೋರ್ಟ್​ ನಿರಾಕರಿಸಿದೆ. 12 ವರ್ಷದ ಹಿಂದಿನ ಆದೇಶಕ್ಕೆ ವಿರುದ್ಧವಾಗಿ ಆದೇಶ ನೀಡಲು ನಿರಾಕರಿಸಿರು ಸರ್ವೋಚ್ಛ ನ್ಯಾಯಾಲಯ. ಪ್ರಕರಣವನ್ನ ಏಳು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ವಿಚಾರಣೆ ನಡೆಸಲಿದೆ ಅಂತ ಸ್ಪಷ್ಟಪಡಿಸಿದೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರನ್ನೊಳಗೊಂಡ ಪೀಠ ಈ ಸೂಚನೆ ನೀಡಿದ್ದು. ಈಗಾಗಲೇ ಸಪ್ತ ಸದಸ್ಯ ಪೀಠ ವಿಚಾರಣೆಗಾಗಿ ನೇಮಕ ಮಾಡಲಾಗಿದೆ. ತಾತ್ಕಾಲಿಕ ಪರಿಹಾರಕ್ಕಾಗಿ ಮಧ್ಯಂತರ ಆದೇಶ ನೀಡಲಾಗದು ಅಂತ ಹೇಳಿದೆ.