ಮೇ 30ರೊಳಗೆ ದೇಣಿಗೆದಾರರ ವಿವರ ಸಲ್ಲಿಸಿ: ರಾಜಕೀಯ ಪಕ್ಷಗಳಿಗೆ ಸುಪ್ರೀಂ ಸೂಚನೆ

ನವದೆಹಲಿ: ಎಲೆಕ್ಟ್ರೋಲ್ ಬಾಂಡ್​ಗಳ ದೇಣಿಗೆದಾರರ ವಿವರಗಳನ್ನ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು ಅಂತಾ ಸುಪ್ರೀಂಕೋರ್ಟ್​, ರಾಜಕೀಯ ಪಕ್ಷಗಳಿಗೆ ಸೂಚಿಸಿದೆ. ಚುನಾವಣಾ ಬಾಂಡ್​ ಸಂಬಂಧ ಮಧ್ಯಂತರ ತೀರ್ಪು ನೀಡಿರುವ ಸುಪ್ರೀಂಕೋರ್ಟ್​, ಮೇ 30ರೊಳಗೆ ಮುಚ್ಚಿದ ಲಕೋಟೆಯಲ್ಲಿ ದೇಣಿಗೆದಾರರ ವಿವರಗಳನ್ನ ನೀಡಬೇಕು. ಯಾವ್ಯಾವ ಪಕ್ಷಗಳು ಯಾಱರಿಂದ ಎಷ್ಟೆಷ್ಟು ದೇಣಿಗೆಗಳನ್ನ ಸಂಗ್ರಹಿಸಲಾಗಿದೆ ಅನ್ನೋದರ ವಿವರ ಸಲ್ಲಿಸಬೇಕು ಅಂತಾ ಸುಪ್ರೀಂಕೋರ್ಟ್​ ಹೇಳಿದೆ. ಚುನಾವಣಾ ಬಾಂಡ್​ ಸಂಬಂಧ ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ದಾಖಲಾಗಿದ್ದವು. ಇದರ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯ್ ನೇತೃತ್ವದ ನ್ಯಾಯಪೀಠ ​ ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು. ರಾಜಕೀಯ ಪಕ್ಷಗಳಿಗೆ ಆರ್ಥಿಕ ನೆರವು ನೀಡುವ ಚುನಾವಣಾ ಬಾಂಡ್ ಯೋಜನೆಯನ್ನ ಪ್ರಶ್ನಿಸಿ ಸಂಸ್ಥೆಯೊಂದು ಕೋರ್ಟ್​ ಮೆಟ್ಟಿಲೇರಿತ್ತು. ಇದ ವಿಚಾರಣೆ ನಡೆಸಿದ ಕೋರ್ಟ್, ಇಂದು ಮಧ್ಯಂತರ ವರದಿ ನೀಡಿದೆ.