ಕೇರಳ ಜಲಪ್ರಳಯಕ್ಕೆ ಸುಪ್ರೀಂ ನ್ಯಾಯಮೂರ್ತಿ ಮನೆ ಆಹುತಿ

ತಿರುವನಂತಪುರ: ದೇವರ ನಾಡು ಕೇರಳ ಶತಮಾನ ಕಂಡರಿಯದ ಪ್ರವಾಹಕ್ಕೆ ತುತ್ತಾಗಿದೆ. ನೆರೆ ಹಾವಳಿಯಿಂದಾಗಿ ಇಲ್ಲಿಯ ಜನರು ಮನೆಗಳನ್ನು ಕಳೆದುಕೊಂಡು ರಕ್ಷಣಾ ಪಡೆಗಳ ಸಹಾಯದಿಂದ ಗಂಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಇನ್ನೂ ಕೆಲವರು ಜೀವರಕ್ಷಣೆಗಾಗಿ ಮೊರೆ ಇಡುತ್ತಿದ್ದಾರೆ.

ಈ ಜಲ ಪ್ರವಾಹ ಎರ್ನಾಕುಲಂ ಜಿಲ್ಲೆಯ ಕಾಲಡಿಯಲ್ಲಿದ್ದ ಸುಪ್ರೀಂಕೋರ್ಟ್​ ನ್ಯಾಯಮೂರ್ತಿ ಜೋಸೆಫ್​​​ ಕುರಿಯನ್​​​​​​ ಅವರ ನಿವಾಸವನ್ನು ತನ್ನ ಆಹುತಿಗೆ ತೆಗೆದುಕೊಂಡಿದೆ. ಈ ನಿವಾಸ ಪ್ರವಾಹಕ್ಕೆ ತುತ್ತಾಗಿರುವ ಕೊಚ್ಚಿ ವಿಮಾನ ನಿಲ್ದಾಣದಿಂದ ಕೇವಲ 7 ಕಿ.ಮೀ ದೂರದಲ್ಲಿದೆ. ಇನ್ನು ನಿವಾಸದಲ್ಲಿ ವಾಸವಾಗಿದ್ದ ಜೋಸೆಫ್​​​ ಕುರಿಯನ್ ಅವರ ಸಹೋದರನನ್ನು ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಸ್ಥಳಾಂತರವಾಗಿರುವುದರಿಂದಾಗಿ ಮೊಬೈಲ್​​ ಸಿಗ್ನಲ್​ ಸಿಗುತ್ತಿಲ್ಲ. ಈ ಕಾರಣಕ್ಕೆ ನ್ಯಾಯಮೂರ್ತಿ ಜೋಸೆಫ್​​​ ಕುರಿಯನ್​​​​​​​​​​​​​​​​​ ಅವರ ಸಹೋದರನನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ.

ಇನ್ನು ಜೋಸೆಫ್​​​ ಕುರಿಯನ್ ಅವರು ದೆಹಲಿಯಲ್ಲಿ ವಕೀಲರು ಆಯೋಜಿಸಿದ್ದ ನೆರೆ ಪರಿಹಾರ ನಿಧಿ ಸಂಗ್ರಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ರು. 5 ತಾಸಿಗೂ ಅಧಿಕ ಕಾಲ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಿರಾಶ್ರಿತರಿಗೆ ಬೇಕಾದ ವಸ್ತುಗಳನ್ನು ಸಂಗ್ರಹಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv