ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ ಸ್ಪರ್ಧಿಸಲು ರೆಡಿ: ರಜಿನೀಕಾಂತ್

ಚೆನ್ನೈ: ಸೂಪರ್ ಸ್ಟಾರ್, ಮಕ್ಕಳ್ ಮಂಡ್ರಮ್ ಪಕ್ಷದ ಮುಖ್ಯಸ್ಥ ರಜನೀಕಾಂತ್, ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಿದ್ದೇವೆ ಎಂದಿದ್ದಾರೆ. ತಮ್ಮ ನಿವಾಸದ ಎದುರು ಮಾಧ್ಯಮ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ನಾನು ವಿಧಾನಸಭೆ ಚುನಾವಣೆಯನ್ನ ಎದುರಿಸಲು ಸಿದ್ಧನಿದ್ದೇನೆ. ನನ್ನ ಗುರಿ ಏನಿದ್ದರೂ ವಿಧಾನಸಭೆ ಚುನಾವಣೆ ಮೇಲೆ. ಹೀಗಾಗಿ ನಾನು ಎಲ್ಲ ರೀತಿಯಿಂದಲೂ ಸಿದ್ಧತೆ ನಡೆಸಿದ್ದೇನೆ. ಯಾವುದೇ ಸಂದರ್ಭದಲ್ಲಿಯಾದರೂ ಚುನಾವಣೆಗೆ ರೆಡಿ ಅಂತಾ ಹೇಳಿದ್ದಾರೆ. ಇನ್ನು, ಈ ಬಾರಿ ಮೋದಿ ನೇತೃತ್ವದ ಮೈತ್ರಿಕೂಟ ಸಂಪೂರ್ಣ ಮೆಜಾರಿಟಿ ಬರುತ್ತಾ ಅಂತಾ ಪತ್ರಕರ್ತರು ಕೇಳಿದ ಪ್ರಶ್ನೆಗೆ, ಮೇ.23ಕ್ಕೆ ಗೊತ್ತಾಗಲಿದೆ ಅಂತಾ ಹೇಳಿದ್ರು.

ಗೆಳೆಯನಿಗೆ ವೆಲ್​ಕಮ್ ಎಂದ ಕಮಲ್
ಇನ್ನು, ರಜಿನಿಕಾಂತ್ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ ಅಂತಾ ಸ್ಪಷ್ಟಪಡಿಸುತ್ತಿದ್ದಂತೆ, ಮಕ್ಕಳ್ ನೀದಿ ಮೈಯಂ ಪಕ್ಷದ ಮುಖ್ಯಸ್ಥ ಕಮಲ್ ಹಾಸನ್, ಸ್ವಾಗತ ಕೋರಿದ್ದಾರೆ. ನಾನು ಈಗಾಗಲೇ ಅವರಿಗೆ ಶುಭಾಶಯ ಕೋರಿದ್ದೇನೆ. ವಿಧಾನಸಭಾ ಅಖಾಡಕ್ಕೆ ಅವರ ಪಕ್ಷ ಇಳಿಯುತ್ತಿರೋದನ್ನ ಸ್ವಾಗತಿಸುತ್ತೇನೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.