ಟ್ವಿಟರ್​ ಮೀಮ್​ಗಳಲ್ಲಿ ಬಿಜೆಪಿಯ ‘ಢಾಯಿ ಕಿಲೋ ಹಾತ್​​​​​​​​​​​​’..!

ಬಾಲಿವುಡ್​ನ ಹಿರಿಯ ನಟ ಸನ್ನಿ ಡಿಯೋಲ್ ಬಿಜೆಪಿ ಸೇರಿದ್ದಾರೆ. ಈಗಾಗಲೇ ಅವರನ್ನ ಪಂಜಾಬ್​ನ ಗುರ್ದಾಸ್​ಪುರ ಕ್ಷೇತ್ರದಿಂದ ಕಣಕ್ಕಿಳಿಸೋದಾಗಿ ಬಿಜೆಪಿ ಕೂಡ ಹೇಳಿದೆ. ಬಿಜೆಪಿ ಸೇರಿದ್ದ ಸನ್ನಿ ಡಿಯೋಲ್, ನನ್ನ ತಂದೆ ಅಟಲ್ ಬಿಹಾರಿ ವಾಜಪೇಯಿ ಜೊತೆ ಸೇರಿದ್ದರು. ಅವರಂತೆಯೇ ನಾನು ಪ್ರಧಾನಿ ಮೋದಿಯವರ ಜೊತೆ ಹೋಗಲು ನಿರ್ಧರಿಸಿದ್ದೇನೆ. ನನಗೆ ಮುಂದಿನ 5 ವರ್ಷಗಳ ಕಾಲ ಮೋದಿ ಮತ್ತೆ ಪ್ರಧಾನಿಯಾಗಬೇಕು ಅಂತ ಹೇಳಿದ್ದರು. ಇದರ ಬೆನ್ನಲ್ಲೇ ಸದ್ಯ 62 ವರ್ಷದ ಸನ್ನಿ ಡಿಯೋಲ್ ಟ್ವಿಟರ್​ನಲ್ಲಿ ಫುಲ್ ಸೌಂಡ್ ಮಾಡ್ತಿದ್ದಾರೆ.

ಸನ್ನಿ ಡಿಯೋಲ್ ಏನೂ ಟ್ವಿಟರ್​ನಲ್ಲಿ ಟ್ವೀಟ್ ಮಾಡುವ ಮೂಲಕ ಸುದ್ದಿಯಾಗಿಲ್ಲ. ಗದರ್​ ಚಿತ್ರದಲ್ಲಿ ಌಂಗ್ರಿ ಲವರ್ ಪಾತ್ರದಿಂದ ಹಿಡಿದು ಬಾರ್ಡರ್ ಚಿತ್ರದಲ್ಲಿ ಆರ್ಮಿ ಮೇಜರ್ ಪಾತ್ರದವರೆಗೆ ಸನ್ನಿ ಡಿಯೋಲ್ ಸಾಕಷ್ಟು ಪಾತ್ರಗಳಲ್ಲಿ ತಮ್ಮ ಛಾಪು ಒತ್ತಿದ್ದಾರೆ. ಅವರ ಹಲವು ಡೈಲಾಗ್​ಗಳು ಕೂಡ ಸಿಕ್ಕಾಪಟ್ಟೆ ಫೇಮಸ್ ಆಗಿವೆ. ಇದೀಗ ಟ್ವಿಟರ್​ನಲ್ಲಿ ಟ್ರೆಂಡಿಂಗ್​ನಲ್ಲಿರೋದು ಕೂಡ ಅವೇ ಡೈಲಾಗ್​ಗಳು.

ಇದೀಗ ಮೀಮ್​​ಗಳು ಸನ್ನಿ ಡಿಯೋಲ್​ರ ಡೈಲಾಗ್​ಗಳನ್ನ ಇಟ್ಟುಕೊಂಡು ಪಾಲಿಟಿಕ್ಸ್​​ಗೆ ಎಂಟ್ರಿ ಕೊಟ್ಟಿರುವ ನಟನಿಗೆ ಟ್ವಿಟರ್​ನಲ್ಲಿ ವೆಲ್ಕಮ್ ಹೇಳ್ತಿದ್ದಾರೆ. ಇದರಲ್ಲಿ ಬಾಲಿವುಡ್ ನಟಿ ಕೋಯಿನಾ ಮಿತ್ರ ಕೂಡ ಹಿಂದೆ ಬಿದ್ದಿಲ್ಲ. ಆ ಮೀಮ್​ಗಳ ಒಂದಷ್ಟು ಸ್ಯಾಂಪಲ್ಸ್ ಇಲ್ಲಿವೆ ನೋಡಿ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv