ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಜಿನೀ ಪುತ್ರಿ

ನವದೆಹಲಿ: ಸೂಪರ್​ ಸ್ಟಾರ್​ ರಜಿನೀಕಾಂತ್​​​ ಪುತ್ರಿ ಸೌಂದರ್ಯ ಇಂದು ಉದ್ಯಮಿ ವಿಶಾಗನ್​​ ವನ್ನಂಗಮುಡಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಚೆನ್ನೈನ ಲೀಲಾ ಪ್ಯಾಲೇಸ್​ ಹೋಟೆಲ್​ನಲ್ಲಿ ದಕ್ಷಿಣ ಭಾರತದ ಸಂಪ್ರದಾಯದಂತೆ ಮದುವೆ ನೆರವೇರಿತು. ತಮಿಳುನಾಡು ಸಿಎಂ ಎಡಪ್ಪಾಡಿ ಕೆ.ಪಳನಿಸ್ವಾಮಿ ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಹಾಜರಿದ್ದರು. ಸೌಂದರ್ಯ ಅವರ ಉಡುಗೆಯನ್ನು ಸೆಲೆಬ್ರಿಟಿ ಡಿಸೈನರ್​ ಅಭುಜಾನಿ ಸಂದೀಪ್​ ಖೊಸ್ಲಾ ವಿನ್ಯಾಸ ಮಾಡಿದ್ದಾರೆ. ಸಂದರ್ಯ ಪಿಂಕ್​​ ಕಲರ್​ ಕಂಚಿಪುರಂ ರೇಷ್ಮೆ ಸೀರೆಯಲ್ಲಿ ಕಂಗೊಳಿಸಿದ್ರೆ, ಮದುಮಗ ವಿಶಾಗನ್​ ಸಾಂಪ್ರದಾಯಿಕ ಪಂಚೆ ಶಲ್ಯ ತೊಟ್ಟು ಮಿಂಚಿದ್ರು. ರಜಿನಿಕಾಂತ್​​ ಕೂಡ ಪಂಚೆ ಹಾಗೂ ಶರ್ಟ್​​ ಧರಿಸಿದ್ದರು.

ಮದುವೆ ಸಮಾರಂಭಕ್ಕೂ ಮುನ್ನ ರಜಿನಿಕಾಂತ್​ ಕುಟುಂಬ, ಆಪ್ತ ಸ್ನೇಹಿತರು ಹಾಗೂ ಕುಟುಂಬಸ್ಥರಿಗಾಗಿ ರಿಸೆಪ್ಷನ್​​ ಏರ್ಪಡಿಸಿತ್ತು. ಇದರ ಬೆನ್ನಲ್ಲೇ ಸಂಗೀತ್​ ಹಾಗೂ ಮೆಹೆಂದಿ ಕಾರ್ಯಕ್ರಮ ಕೂಡ ನಡೆಯಿತು. ಮೆಹೆಂದಿ ಕಾರ್ಯಕ್ರಮದ ಫೋಟೋಗಳನ್ನ ಸೌಂದರ್ಯ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಸಂಗೀತ್​​ನಲ್ಲಿ ರಜಿನಿಕಾಂತ್​ ಡ್ಯಾನ್ಸ್​ ಮಾಡಿರೋ ವಿಡಿಯೋ ವೈರಲ್ ಆಗಿದೆ.

ಸೌಂದರ್ಯ ಹಾಗೂ ವಿಶಾಗನ್​ ಇಬ್ಬರಿಗೂ ಇದು ಎರಡನೇ ಮದುವೆ. ವಿಶಾಗನ್​​ ವಾನಂಗಮುಡಿ ಫಾರ್ಮಸಿಟಿಕಲ್​​ ಕಂಪನಿಯೊಂದರ ಮಾಲೀಕ ಹಾಗೂ ನಟ. ಕಳೆದ ವರ್ಷ ರಿಲೀಸ್​ ಆದ ವಂಜಗರ್​​ ಉಳಗಂ ಚಿತ್ರದಲ್ಲಿ ನಟಿಸಿದ್ದರು. ಸೌಂದರ್ಯ 2010ರಲ್ಲಿ ಉದ್ಯಮಿ ಆರ್​​. ಅಶ್ವಿನ್​​ ಅವರನ್ನ ವರಿಸಿದ್ದರು. 2017ರಲ್ಲಿ ಇಬ್ಬರೂ ವಿಚ್ಛೇದನ ಪಡೆದರು. ಸೌಂದರ್ಯ ಹಾಗೂ ಅಶ್ವಿನ್​​ಗೆ ಮೂರು ವರ್ಷದ ಮಗನಿದ್ದಾನೆ. ಇನ್ನು ವಿಶಾಗನ್​​, ಮ್ಯಾಗಜಿನ್​​ವೊಂದರ ಸಂಪಾದಕಿ ಕನ್ನಿಕಾ ಕುಮಾರನ್​ ಅವರನ್ನ ವಿವಾಹವಾಗಿ ವಿಚ್ಛೇದನ ಪಡೆದಿದ್ದಾರೆ.

Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv