ಬೇಸಿಗೆಗೆ ಬೆಸ್ಟ್ ಈ 5 ಪುದೀನಾ ಪಾನೀಯ..!

ಪುದೀನಾವನ್ನು ಪ್ರಪಂಚದಾದ್ಯಂತ ಹೇರಳವಾಗಿ ಬಳಸಲಾಗುತ್ತದೆ. ಇದರಲ್ಲಿ ಔಷಧೀಯ ಗುಣಗಳು ಹೆಚ್ಚಾಗಿದ್ದು, ಅಡುಗೆಯ ರುಚಿ ಹೆಚ್ಚಿಸುವುದಲ್ಲದೇ ಜೀರ್ಣಕ್ರಿಯೆ, ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಇನ್ಫೆಕ್ಷನ್‌ನಿಂದ ರಕ್ಷಿಸುತ್ತದೆ. ಹೆಚ್ಚು ಪ್ರಯೋಜನಗಳನ್ನು ಹೊಂದಿರುವ ಪುದೀನಾ, ಸಮ್ಮರ್‌ ಡಯಟ್‌ನಲ್ಲಿ ಬೆಸ್ಟ್. ಪುದೀನಾದಿಂದ ತಯಾರಿಸೋ ಈ 5 ಪಾನೀಯಗಳು ನಿಮ್ಮನ್ನು ಸಮ್ಮರ್ ಟೈಮ್‌ನಲ್ಲಿ ಫ್ರೆಶ್ ಆಗಿರುಸುವಲ್ಲಿ ಸಹಾಯ ಮಾಡುತ್ತವೆ.

1 ಮಿಂಟ್ ಲೈಮ್ ಫಿಜ್: ತೂಕ ನಷ್ಟಕ್ಕೆ ನಿಂಬೆ ಮತ್ತು ಪುದೀನಾ ಪಾನೀಯ ಉತ್ತಮ. ಪುದೀನಾದಲ್ಲಿ ಪೌಷ್ಠಿಕಾಂಶಗಳು ಸಮೃದ್ಧವಾಗಿದ್ದು, ಇದು ತೂಕ ಇಳಿಸಲು ಸಹಾಯ ಮಾಡುತ್ತದೆ. ನಿರ್ಜಲೀಕರಣವನ್ನು ನಿವಾರಿಸುತ್ತದೆ. ನಿಂಬೆ ರಸದ ಜತೆಗೆ ಪುದೀನಾ ಎಲೆಗಳನ್ನು ಸೇರಿಸಿ ಈ ಪಾನೀಯ ತಯಾರಿಸಲಾಗುತ್ತದೆ. ಬೇಸಿಗೆಯಲ್ಲಿ ಈ ಪಾನೀಯ ಸೇವಿಸಿದ್ರೆ ಒತ್ತಡ, ದೇಹದ ಉಷ್ಣತೆಯನ್ನು ಕಡಿಮೆಗೊಳಿಸಲು ಸಹಾಯ ಮಾಡುತ್ತದೆ.

2. ಎಳನೀರು, ನಿಂಬೆ, ಪುದೀನಾ: ಬೇಸಿಗೆಯಲ್ಲಿ ಬಾಯಾರಿಕೆ ಕಡಿಮೆ ಮಾಡಲು ಎಳನೀರು, ಕೂಲ್ ಡ್ರಿಂಕ್ಸ್, ಜ್ಯೂಸ್, ತಂಪು ಪಾನೀಯಾಗಳ ಮೊರೆ ಹೋಗುತ್ತೇವೆ. ಆರೋಗ್ಯಕರ ಎಳನೀರು, ನಿಂಬೆ ರಸ ಹಾಗೂ ಪುದೀನಾ ಪಾನೀಯ ಕೂಡ ಸಮ್ಮರ್ ಟೈಮ್‌ನಲ್ಲಿ ನಿಮ್ಮನ್ನು ಕೂಲ್ ಆಗಿರುಸುತ್ತದೆ. ಬೇಸಿಗೆಯ ಉಷ್ಣತೆಯನ್ನು ನಿವಾರಿಸಲು ಪುದೀನಾ ಅತ್ಯುತ್ತಮ ಪಾನೀಯ. ಎಳನೀರು, ನಿಂಬೆ ರಸ ಹಾಗೂ ಪುದೀನಾ ಮಿಶ್ರಿತ ಈ ಡ್ರಿಂಕ್ಸ್ ಪ್ರತಿ ನಿತ್ಯ ಸೇವಿಸಬಹುದು.

3. ಮಿಂಟ್ ಟೀ: ಪುದೀನಾ ಚಹಾದಲ್ಲಿ ನೋವು ನಿವಾರಕ ಗುಣಗಳಿವೆ. ಇದು ಸ್ನಾಯುಗಳಲ್ಲಿರುವ ನೋವನ್ನು ನಿವಾರಿಸುತ್ತದೆ. ಈ ಚಹಾದಲ್ಲಿ ಮೆಂಥಾಲ್ ಇರುವುದರಿಂದ  ಜೀರ್ಣಕ್ರಿಯೆವನ್ನು ಸುಲಭಗೊಳಿಸುತ್ತದೆ. ಬೇಸಿಗೆಯಲ್ಲಿ ಕಾಫಿ, ಚಹಾ ಕುಡಿಯಲು ಆಗಲ್ಲ. ಆಗ ಪುದೀನಾ ಚಹಾವನ್ನು ಟ್ರೈ ಮಾಡಬಹುದು. ಪುದೀನಾ ಎಲೆಗಳನ್ನು ನೀರಿನಲ್ಲಿ ಕುದಿಸಿ ಮಿಂಟ್ ಟೀ ತಯಾರಿಸಬಹುದು.

4. ಪುದೀನಾ ಲಸ್ಸಿ: ಸಾಮಾನ್ಯವಾಗಿ ಬೇಸಿಗೆಯಲ್ಲಿ ಎಲ್ಲರೂ ಲಸ್ಸಿ ಕುಡಿಯಲು ಇಷ್ಟ ಪಡ್ತಾರೆ. ನಾಲಿಗೆಗೆ ರುಚಿ ಎನಿಸುವ ಪುದೀನಾ ಲಸ್ಸಿ ಒಮ್ಮೆ ಟ್ರೈ ಮಾಡಬಹುದು. ಬೇಸಿಗೆಯಲ್ಲಿ ದೇಹದಲ್ಲಿ ನೀರಿನಾಂಶವನ್ನು ಕಾಪಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ. ಪುದೀನಾ ಲಸ್ಸಿ ಕುಡಿದರೆ, ದೇಹವನ್ನು ಬಿಸಿಲಿನ ತಾಪದಿಂದ ರಕ್ಷಿಸಿ, ಎನರ್ಜಿ ನೀಡುತ್ತದೆ. ಹಾಗೇ ಬ್ಯಾಕ್ಟೇರಿಯಾಗಳಿಂದ ದೂರವಿಡುತ್ತದೆ.

5 ಮಿಂಟ್, ಕಿವಿ ಲೆಮನೇಡ್: ಪೌಷ್ಟಿಕಾಂಶ ಹೆಚ್ಚಿಸುವಲ್ಲಿ ಈ ಪಾನೀಯ ಸಹಾಯ ಮಾಡುತ್ತದೆ. ಪುದೀನ್, ಕಿವಿ ಹಣ್ಣು , ಹಾಗೂ ನಿಂಬೆಹಣ್ಣು ಮಿಶ್ರಿತ ಈ ಪಾನೀಯವನ್ನು ಸಿದ್ಧಪಡಿಸಿ, ಪ್ರತಿ ದಿನ ಸೇವಿಸಿದ್ರೆ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.

Follow us on:

YouTube: firstNewsKannada Instagram: firstnews.tv Facebook: firstnews.tv Twitter: firstnews.tv