ಯೂಟ್ಯೂಬ್‌ ಟ್ರೆಂಡಿಂಗ್‌ನಲ್ಲಿ ಅಮರ್‌ ಚಿತ್ರದ ಸುಮ್ಮನೆ ಹಾಡು!

ರೆಬೆಲ್ ಸ್ಟಾರ್‌ ಅಂಬರೀಶ್ ಪುತ್ರ ಅಭಿಷೇಕ್ ಚೊಚ್ಚಲ ಚಿತ್ರದ ‘ಸುಮ್ಮನೆ’ ಲಿರಿಕಲ್ ವಿಡಿಯೋ ಸಾಂಗ್ ಇತ್ತೀಚೆಗೆ ಯುಟ್ಯೂಬ್‌ನಲ್ಲಿ ರಿಲೀಸ್ ಆಗಿತ್ತು. ಈ ಮೆಲೋಡಿ ಹಾಡು ಈಗಾಗಲೇ 3ಲಕ್ಷ 95 000ಕ್ಕೂ ಅಧಿಕ ವೀಕ್ಷಣೆ ಕಂಡಿದೆ. ಅಲ್ಲದೇ, ಯುಟ್ಯೂಬ್‌ ಟ್ರೆಂಡಿಂಗ್‌ನಲ್ಲಿ 3ನೇ ಸ್ಥಾನದಲ್ಲಿದ್ದು ಧೂಳೆಬ್ಬಿಸುತ್ತಿದೆ. ಒಮ್ಮೆ ಕೇಳಿದ್ರೆ ಮತ್ತೊಮ್ಮೆ ಕೇಳಬೇಕು ಅನಿಸೋ ಸುಮಧುರ ಹಾಡಿಗೆ ಲಕ್ಷಾಂತರ ಮಂದಿ ಮನ ಸೋತಿದ್ದಾರೆ. ಖ್ಯಾತ ಗಾಯಕ, ಗಾಯಕಿ ಸೋನು ನಿಗಮ್ ಹಾಗೂ ಶ್ರೇಯಾ ಘೋಷಾಲ್ ಹಾಡಿರೋ ಈ ಹಾಡಿಗೆ ಕವಿರಾಜ್ ಸಾಹಿತ್ಯ ಬರೆದಿದ್ದಾರೆ. ಅರ್ಜುನ್ ಜನ್ಯಾ ಮ್ಯೂಸಿಕ್ ಮ್ಯಾಜಿಕ್ ಇದೆ.

ಲಿರಿಕಲ್ ವಿಡಿಯೋದಲ್ಲಿ ಸಿನಿಮಾದ ಮೇಕಿಂಗ್‌ ದೃಶ್ಯವಿದೆ. ಅದ್ಭುತವಾದ ಲೋಕೇಷನ್ಸ್, ಮಂಜು-ಮಳೆ, ಬೈಕ್‌ ರೇಸ್ ಹೀಗೆ ಕಣ್ಣಿಗೆ ಹಬ್ಬ ನೀಡೋ ಕುತೂಹಲಭರಿತ ಲವ್‌ ಕಹಾನಿಯಿದ್ದು, ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ. ಅಭಿ-ತಾನ್ಯಾ ಹೋಪ್‌ ಆನ್‌ಸ್ಕ್ರೀನ್ ಕೆಮಿಸ್ಟ್ರಿ ತುಂಬಾ ಮುದ್ದಾಗಿದೆ. ಈ ಮೊದಲು ರಿಲೀಸ್ ಆದ ‘ಮರೆತು ಹೋಯಿತೆ ನನ್ನೆಯ ಹಾಜರಿ’ ಹಾಡು ಕೂಡ ಯೂಟ್ಯೂಬ್‌ನಲ್ಲಿ ಜೋರು ಸದ್ದು ಮಾಡ್ತಿದೆ. ನಾಗಶೇಖರ್ ನಿರ್ದೇಶನದಲ್ಲಿ ಮೂಡಿಬರ್ತಿರೋ ಅಮರ್‌ ಚಿತ್ರ ಅಂಬರೀಶ್ ಅವರ ಹುಟ್ಟುಹಬ್ಬದ ವಿಶೇಷವಾಗಿ ಮೇ.31ರಂದು ರಿಲೀಸ್ ಆಗಲಿದೆ.