ಅಂಬರೀಶ್ ಎಲ್ಲೂ ಹೋಗಿಲ್ಲ, ನಮ್ ಜೊತೆಯಲ್ಲೇ ಇದ್ದಾರೆ -ಸುಮಲತಾ ಅಂಬರೀಶ್

ಬೆಂಗಳೂರು: ಇವತ್ತು ರೆಬೆಲ್ ಸ್ಟಾರ್ ಅಂಬರೀಶ್ 67ನೇ ಹುಟ್ಟು ಹಬ್ಬ. ಈ ಹಿನ್ನೆಲೆ ಕಂಠೀರವ ಸ್ಟೂಡಿಯೋದಲ್ಲಿರೋ ಅಂಬಿ ಸಮಾಧಿಗೆ ಪೂಜೆ ಸಲ್ಲಿಸಲು ಪತ್ನಿ ಸುಮಲತಾ ಅಂಬರೀಶ್ ಹಾಗೂ ಅಂಬಿ ಪುತ್ರ ಅಭಿಷೇಕ್ ಆಗಮಿಸಿದ್ರು. ಹಸಿರು ಬಣ್ಣದ ಸೀರೆಯುಟ್ಟು ಬಂದ ಸುಮಲತಾ ಅವರು ಅಂಬಿ ಸಮಾಧಿಗೆ ಕಡಲೆಪುರಿ ಮಾಲಾರ್ಪಣೆ ಮಾಡಿ ಪೂಜೆ ಮಾಡಿದ್ರು.

ಈ ವೇಳೆ ಮಾತನಾಡಿದ ಸುಮಲತಾ, ಅಂಬರೀಶ್ ಅವರೂ ಎಲ್ಲೂ ಹೋಗಿಲ್ಲ. ನಮ್ ಜೊತೆಯಲ್ಲೇ ಇರೋ ನಂಬಿಕೆಯಿದೆ. ಅವರು ಹಿಂದೆಯಿದ್ದು ನಡೆಸ್ತಿದ್ದಾರೆ ಅನ್ನೋ ನಂಬಿಕೆಯಿದೆ. ಜನ ನನ್ನನ್ನ ನಂಬಿಕೆಯಿಟ್ಟು ಚುನಾವಣೆಯಲ್ಲಿ ಗೆಲ್ಲಿಸಿದ್ದಾರೆ. ಆ ನಂಬಿಕೆಯನ್ನ ಉಳಿಸಿಕೊಂಡು ಹೋಗ್ತೀನಿ. ಅಂಬರೀಶ್ ಅವರ ಹೆಸರಿಗೆ ಕಳಂಕ ಬರದಂತೆ ನಡೆದುಕೊಳ್ತೀನಿ. ಮಂಡ್ಯದ ಜನತೆಗೆ ಮಾತು ಕೊಡ್ತೀನಿ ಅಂತ ಅವರು ಹೇಳಿದ್ದಾರೆ. ಇದೇ ವೇಳೆ ಕಾವೇರಿ ವಿಚಾರವಾಗಿ, ನೀರಿನ ವಿಷಯದಲ್ಲಿ ರಾಜಕಾರಣ ಮಾಡಬಾರದು. ಚುನಾವಣೆ ಸಮಯದಲ್ಲಿ ರಾಜಕೀಯ ವಿರೋಧಿಗಳು ಹೇಗೆ ನಡೆದುಕೊಂಡಿದ್ದಾರೆ ಎಲ್ರಿಗೂ ಗೊತ್ತು. ಅವರು ಇದ್ರಿಂದ ಪಾಠ ಕಲೀಬೇಕು. ಈ ರೀತಿ ಮಾತಾಡಬಾರದು ಅಂತಾ ಗೊತ್ತಾಗಬೇಕು. ಇದ್ರಿಂದ ರೈತರ ಸಮಸ್ಯೆ ಪರಿಹಾರ ಆಗಲ್ಲ. 5 ನಿಮಿಷ ಪಬ್ಲಿಸಿಟಿಗೋಸ್ಕರ ನನ್ನ ಹೆಸರು ಬಳಸಬೇಡಿ. ನನ್ನ ಕೆಲಸ ನಾನು ಮಾಡ್ತೀನಿ. 8 ಜನ ಶಾಸಕರಿದ್ದಾರೆ. ಜನ ಅವರಿಗೂ ಮತ ಹಾಕಿದ್ದಾರೆ.ಇದು ಎಲ್ಲರ ಜವಾಬ್ದಾರಿ. ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಸೇರಿ ಮಾಡಬೇಕು ಕಾವೇರಿ ವಿಷಯವನ್ನ ಪರಿಹಾರ ನಾನು ಈ ವಿಷಯದಲ್ಲಿ ಒಂದಷ್ಟು ಯೋಜನೆಗಳ ಬಗ್ಗೆ ಯೋಚನೆ ಮಾಡಿದಿನಿ. 4ಜನ ಎಕ್ಸ್‌ಪರ್ಟ್ಸ್ ಜೊತೆ ಮಾತಾಡಿದಿನಿ. ಸದ್ಯ ನಾನಿನ್ನೂ ಪ್ರಮಾಣವಚನ ಸ್ವೀಕರಿಸಿಲ್ಲ. ಚುನಾವಣೇಲಿ ಸೋತ ಕಹಿಯನ್ನ ಈ ವಿಷಯದಲ್ಲಿ ತೋರಿಸೋದು ಬೇಡ. ನನ್ನ ಉದ್ದೇಶ ಒಂದೇ. ಜನ ನನಗೆ ಮುಖ್ಯ. ಅವರಿಗಾಗೇ ಕೆಲಸ ಮಾಡ್ತಿನಿ ವಿನಃ ವಿರೋಧಿಗಳ ಬಗ್ಗೆ ಯೋಚನೆ ಮಾಡಲ್ಲ ಅಂದ್ರು. ಹಾಗೇ ಪ್ರತಿ ವರ್ಷ ಅಂಬರೀಶ್‌ಗೆ ಸಾವಿರಾರು ಜನ ಬಂದು ವಿಶ್ ಮಾಡ್ತಿದ್ರು. ಇಂದಿಗೂ ಅಭಿಮಾನಿಗಳು ಬರ್ತಿದ್ದಾರೆ. ಅವರು ಎಲ್ಲೂ ಹೋಗಿಲ್ಲ ನಮ್ಮಲ್ಲೇ ಇದ್ದಾರೆ ಎಂದರು. ಇನ್ನು ನಾನು ಚಿರಂಜೀವಿನ ಭೇಟಿ ಯಾಗಿಲ್ಲ. ಫೋನ್‌ನಲ್ಲಿ ಮಾತಾಡಿದ್ದೀನಿ ಅಂತಾ ಕೂಡ ಅವರು ಸ್ಪಷ್ಟಪಡಿಸಿದ್ದಾರೆ.

ಚುನಾವಣೆಯಲ್ಲಿ ಗೆದ್ದ ಖುಷಿಯಲ್ಲಿ ಇಂದು ಸಂಜೆ ಮಂಡ್ಯದ ಜನತೆಗೆ ಸುಮಲತಾ ಕೃತಜ್ಞತೆ ಸಲ್ಲಿಸಲಿದ್ದಾರೆ. ಇದಕ್ಕಾಗೇ ಇಂದು ಮಂಡ್ಯದಲ್ಲಿ ಅಂಬಿ ಜಯಂತೋತ್ಸವ ನಡೆಯಲಿದೆ. ಸಂಸದರಾಗಿ ಆಯ್ಕೆ ಆದ ಬಳಿಕ ಮಂಡ್ಯ ಜನರಿಗೆ ಇಂದು ಸಮಲತಾ ಅಂಬರೀಶ್ ಧನ್ಯವಾದ ಸಲ್ಲಿಸಲಿದ್ದಾರೆ. ಅದ್ಧೂರಿ ಸ್ವಾಭಿಮಾನಿ ಸಮಾವೇಶ ಏರ್ಪಡಿಸಿದ್ದಾರೆ. ಇನ್ನು ಸಮಾವೇಶದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಕೂಡ ಭಾಗಿಯಾಗಲಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv