ನಟರಾದ್ರೆ ಏನು? ಯಾರಾದ್ರೂ ಪ್ರಚಾರ ಮಾಡ್ಲಿ, ಜನ ತೀರ್ಮಾನಿಸ್ತಾರೆ: ಕುಮಾರಸ್ವಾಮಿ

ಮಂಡ್ಯ: ಚುನಾವಣಾ ಆಖಾಡಕ್ಕೆ ಇಳಿಬೇಕು ಇಳಿಯೋಣ. ನನಗೆ ಯಾವುದೇ ಆತಂಕವಿಲ್ಲ. ನನ್ನ ನೋಡಿದ್ರೆ ಟೆನ್ಶನ್ ಕಾಣುತ್ತಾ..? ಸಮಾವೇಶಗಳಿಗೆ ನಾನು ಬಹಳ ಜನರನ್ನ  ಸೇರಿಸಿದ್ದೀನಿ ಎಂದು ಸುಮಲತಾ ಅಂಬರೀಶ್​​ಗೆ ಪರೋಕ್ಷವಾಗಿ ಸಿಎಂ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ.

ಜಿಲ್ಲೆಯ ಪಾಂಡವಪುರ ತಾಲೂಕಿನ ಚೆಲುವನಾರಾಯಣಸ್ವಾಮಿ ದೇಗುಲದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಕುಮಾರಸ್ವಾಮಿ, 25ಕ್ಕೆ ನಿಖಿಲ್  ಕುಮಾರ್ ನಾಮಪತ್ರ ಸಲ್ಲಿಸ್ತಾರೆ, ಅವತ್ತು ನಾನು ಬರ್ತೇನೆ. ನಾಳೆ ಮಂತ್ರಿಗಳ ಜೊತೆ ಸೇರಿ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಕೆ ಆಗುತ್ತೆ, ಮಾರ್ಚ್​ 25ರ ತನಕ ವೇಟ್ ಮಾಡಿ ಎಂದರು. ಇನ್ನು ಸ್ಟಾರ್  ನಟರು ಸುಮಲತಾ ಅವರ ಪ್ರಚಾರಕ್ಕೆ ಬೆಂಬಲ ನೀಡಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸಿಎಂ ಕುಮಾರಸ್ವಾಮಿ, ನಟರಾದ್ರೆ ಏನು..? ಖಳನಾಯಕರಾದ್ರೆ ಏನು..? ಯಾರಾದ್ರೂ ಪ್ರಚಾರ ಮಾಡ್ಲಿ. ಅಂತಿಮವಾಗಿ ಜನ ತೀರ್ಮಾನ ಮಾಡ್ತಾರೆ ಎಂದರು.

ಸಿಎಂ ಕುಮಾರಸ್ವಾಮಿ ಆಗಮನದ ವೇಳೆ ಸುಮಲತಾ ಪರ ಘೋಷಣೆ ಕೂಗಿದ ಅಭಿಮಾನಿಗಳು

ಸಿಎಂ ಕುಮಾರಸ್ವಾಮಿ ಮೇಲಕೋಟೆಗೆ ತಮ್ಮ ಕಾರಿನಲ್ಲಿ ಅಗಮಿಸುತ್ತಿದ್ದ ವೇಳೆ, ಸುಮಲತಾ ಅಂಬರೀಶ್​ ಅವರ ಅಭಿಮಾನಿಗಳು ಅಂಬರೀಶಣ್ಣಂಗೆ ಜೈ, ಸುಮಲತಾಗೆ  ಜೈ ಎಂದು ಕೂಗುತ್ತಾ ಸಿಎಂ ಕುಮಾರಸ್ವಾಮಿ ಮುಜುಗರಕ್ಕೀಡಾಗುವಂತೆ ಮಾಡಿದ ಘಟನೆ ನಡೆದಿದೆ.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv