ಸುಮಲತಾ ಗೆಲುವು ಖಚಿತ, ಸೋಲುವ ಭೀತಿಯಿಂದ ಹೀಗೆಲ್ಲ ಮಾತಾಡ್ತಿದ್ದಾರೆ: ಬಿಎಸ್​​ವೈ

ಕೊಪ್ಪಳ: ಸುಮಲತಾ ಅಂಬರೀಶ್ ಗೆಲ್ಲುವುದು ಖಚಿತ. ಸಂಸದ ಶಿವರಾಮೇಗೌಡ ಹಗುರವಾಗಿ ಮಾತಾಡುವುದಕ್ಕೆ ಹೆಸರಾಗಿದ್ದಾರೆ. ಸೋಲುವ ಭೀತಿಯಿಂದ ಹೀಗೆಲ್ಲ ಮಾತಾಡ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. ನಿನ್ನೆ ಸಂಸದ ಶಿವರಾಮೇಗೌಡ ,ತಮಿಳುನಾಡು ಜಯಲಲಿತಾರನ್ನ ಮೀರಿಸುವಂತಾ ಮಾಯಾಂಗನೆಯಂತೆ ಆಡ್ತಿದ್ದಾರೆ ಎಂದು ಸುಮಲತಾ ಅಂಬರೀಶ್ ಹೆಸರು ಹೇಳದೇ, ಪರೋಕ್ಷವಾಗಿ ಕಿಡಿಕಾರಿದ್ದರು. ಇದಕ್ಕೆ ಸಂಬಂಧಪಟ್ಟಂತೆ ಕೊಪ್ಪಳದಲ್ಲಿ ಪ್ರತಿಕ್ರಿಯಿಸಿದ ಬಿಎಸ್‌ವೈ, ಮಂಡ್ಯದಲ್ಲಿ ಸುಮಲತಾ ಗೆಲುವು ಖಚಿತವಾಗಿದೆ ಎಂದರು.

ಸದ್ಯ ವಾತಾವರಣ ನಮ್ಮ ಪರ ಇಲ್ಲ ಅಂತಾ ಅವರೇ ತೋರಿಸಿಕೊಳ್ಳುತ್ತಿದ್ದಾರೆ. ಕೇಂದ್ರದ ಸಾಧನೆ, ರಾಜ್ಯ ಸರ್ಕಾರದ ವೈಫಲ್ಯತೆ, ಹಿಂದಿನ ಬಿಜೆಪಿ ಸರ್ಕಾರದ ಸಾಧನೆ, ನಮ್ಮ ಗೆಲುವಿಗೆ ದಾರಿಯಾಗಿದೆ. ಸೋಲುವ ಹತಾಶೆಯಿಂದ ಕುಮಾರಸ್ವಾಮಿ ಮನಬಂದಂತೆ ಮಾತಾಡ್ತಿದ್ದಾರೆ ಎಂದರು. 2014ಕ್ಕೆ ಹೋಲಿಕೆ ಮಾಡಿದರೆ ಈಗ ಒಳ್ಳೆಯ ವಾತವರಣ ಇದೆ. ಕುಮಾರಸ್ವಾಮಿ ವರ್ತನೆ ಸರಿಯಾಗಿಲ್ಲ. ಹಗುರವಾಗಿ ಮಾತನಾಡುವ ಮೂಲಕ ಸೈನಿಕರಿಗೆ ಅಪಮಾನ ಮಾಡಿದ್ದಾರೆ. ಯಾರೂ ಕೂಡ ಸೈನಿಕರನ್ನು ದುರಪಯೋಗ ಮಾಡಿಕೊಳ್ಳುವುದಿಲ್ಲ. ಎಲ್ಲರೂ ಸೈನಿಕರನ್ನು ಗೌರವದಿಂದ ಕಾಣಬೇಕು. ಅವರನ್ನು ರಾಜಕರಾಣಕ್ಕೆ ಉಪಯೋಗಿಸಿಕೊಳ್ಳಬಾರದು ಎಂದು ಬಿಎಸ್‌ವೈ ಹೇಳಿದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv