ನಾಮ ಪತ್ರ ಸಲ್ಲಿಕೆ ಬಳಿಕ ಸುಮಲತಾ ಱಲಿ, ಬೆಂಬಲಿಗರ ಜೋಶ್ ಫುಲ್ ಹೈ..!

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಬೆನ್ನಲ್ಲೇ ಸುಮಲತಾ ಅಂಬರೀಶ್​ ಬೃಹತ್​ ರೋಡ್​ ಶೋ ಮೂಲಕ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಡಿಸಿ ಕಚೇರಿಯಿಂದ ಮಂಡ್ಯದ ಸಿಲ್ವರ್​ ಜ್ಯುಬಿಲಿ ಪಾರ್ಕ್​​ನತ್ತ ರೋಡ್​ ಶೋ ನಡೆದಿದೆ. ರೋಡ್​​ ಶೋನಲ್ಲಿ ಸಾವಿರಾರು ಅಂಬರೀಷ್​​ ಅಭಿಮಾನಿಗಳು, ಕಾಂಗ್ರೆಸ್​​ ಕಾರ್ಯಕರ್ತರೂ ಸೇರಿದಂತೆ ನಟರಾದ ಯಶ್​ ಮತ್ತು ದರ್ಶನ್​ ಅವರು ಸುಮಲತಾ ಎಡಬಲದಲ್ಲಿ ನಿಂತು ಸಾಥ್​​ ನೀಡುತ್ತಿದ್ದಾರೆ. ಱಲಿಗೆ ಕಲಾತಂಡಗಳ ಮೆರಗು ಕಳೆಕಟ್ಟಿದ್ದು, ಸುಮಲತಾ ಪರವಾಗಿ ಅಭಿಮಾನಿಗಳು ಜಯಘೋಷಣೆ ಕೂಗಿ ಬೆಂಬಲ ನೀಡುತ್ತಿದ್ದಾರೆ. ತೆರೆದ ವಾಹನದಲ್ಲಿ ಸುಮಲತಾ ಸೇರಿದಂತೆ ಪುತ್ರ ಅಭಿಷೇಕ್​​, ಹಿರಿಯ ನಟ ದೊಡ್ಡಣ್ಣ, ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​​​, ನಟ ದರ್ಶನ್​​ ಹಾಗೂ ಯಶ್​​​ ಕೂಡ ರೋಡ್​​ ಶೋನಲ್ಲಿ ಭಾಗಿಯಾಗಿದ್ದಾರೆ. ಇನ್ನು, ರೋಡ್​​ ಶೋ ಮೂಲಕವೇ ಸಿಲ್ವರ್​​ ಜ್ಯುಬಿಲಿ ಪಾರ್ಕ್​ನಲ್ಲಿ ನಡೆಯುವ ಬೃಹತ್​ ಸಮಾವೇಶ ಸ್ಥಳಕ್ಕೆ ಸುಮಲತಾ ಅವರು ತಲುಪಲಿದ್ದಾರೆ. ಅಂಬಿ ಅಭಿಮಾನಿಗಳು ಱಲಿಯಲ್ಲಿ ಅಂಬರೀಶ್​ ಅವರ ಭಾವಚಿತ್ರ ಹಿಡಿದು ಸಂಭ್ರಮಿಸಿದರು.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv