ನಮ್ಮ ಸ್ನೇಹ ಶಾಶ್ವತ, ನಿಮ್ಮ ನೆನಪು ಅಮರ-ಸುಮಲತಾ ಅಂಬರೀಶ್

ಇವತ್ತು ಡಾ.ವಿಷ್ಣುವರ್ಧನ್ ಹುಟ್ಟುಹಬ್ಬಕ್ಕೆ ಸುಮಲತಾ ಅಂಶರೀಶ್ ಕೂಡ ಶುಭಕೋರಿದ್ದಾರೆ.ತಮ್ಮ ಹಳೇನೆನಪುಗಳ ಬುತ್ತಿ ಬಿಚ್ಚಿ ಅದರಲ್ಲಿ ತಾವು ಅಂಬರೀಶ್,ಭಾರತಿ,ವಿಷ್ಣುವರ್ಧನ್ 4 ಜನ ಒಟ್ಟಿಗೆ ನಿಂತು ಫೋಟೋ ಪೋಸ್‌ ಕೊಟ್ಟಿರೋ ಫೋಟೋವೊಂದನ್ನ ಟ್ವಿಟರ್‌ನಲ್ಲಿ ಅಪ್ಲೋಡ್ ಮಾಡಿದ್ದಾರೆ.
“ಮರೆಯಲಾಗದ ಅಮರ ನೆನಪುಗಳು, ಅಮರವಾದ ಸ್ನೇಹ,ಮರೆಯಲಾಗದ ಲೆಜೆಂಡ್ ವಿಷ್ಣುವರ್ಧನ್, ಸದಾ ನಿಮ್ಮ ನೆನಪಿನಲ್ಲಿ ನಾವು” ಅಂತಾ ಬರೆದುಕೊಂಡಿದ್ದಾರೆ.
ಕಥಾನಾಯಕ,ಸತ್ಯಜ್ಯೋತಿ, ಕರ್ಣ ಸೇರಿದಂತೆ ಹಲವು ಸಿನಿಮಾಗಳಲ್ಲಿ ಸುಮಲತಾ-ವಿಷ್ಣುವರ್ಧನ್ ಜೋಡಿಯಾಗಿ ನಟಿಸಿದ್ದಾರೆ. ಮೊದಲಿಂದಲೂ ವಿಷ್ಣುದಾದಾ-ಸುಮಲತಾ ಅಂಬರೀಶ್ ಕುಟುಂಬದವ್ರು ತುಂಬಾ ಆತ್ಮೀಯರು. ಇನ್ನು ಅಂಬರೀಶ್-ವಿಷ್ಣು ಕುಚುಕು ಗೆಳೆಯರು ಅನ್ನೋದು ಗೊತ್ತೇ ಇದೆ. ಹೀಗೆ ಆತ್ಮೀಯ ಗೆಳೆಯನಿಗೆ ಸುಮಲತಾ ಶುಭಕೋರಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv