ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಚರ್ಚ್​ಗೆ ಭೇಟಿ ನೀಡಿದ ಸುಮಲತಾ

ಮಂಡ್ಯ: ಇಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್​ ಅಂಬೇಡ್ಕರ್ ಅವರ ಜಯಂತಿ ಹಿನ್ನೆಲೆಯಲ್ಲಿ, ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್​, ನಗರದ  ಡಿಸಿ ಕಚೇರಿ ಎದುರಿನ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ರು. ಬಳಿಕ ಸುಭಾಷ್ ನಗರದಲ್ಲಿರುವ ಸಾಡೆ ಸ್ಮಾರಕ ಚರ್ಚ್​ಗೆ ತೆರಳಿ, ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಕ್ರೈಸ್ತ ಬಾಂಧವರ ಮತಯಾಚನೆ ಮಾಡಿದ್ರು. ಇದೇ ವೇಳೆ ಕ್ರೈಸ್ತ ಸಮುದಾಯದ ಮುಖಂಡರ ಜೊತೆ ಸಮಾಲೋಚನೆ ನಡೆಸಿ, ಬೆಂಬಲ ಕೋರಿದ್ರು. ಕ್ರೈಸ್ತ ಧರ್ಮ ಗುರುಗಳು ಸುಮಲತಾ ಅಂಬರೀಶ್​ ಗೆಲುವಿಗಾಗಿ ಪ್ರಾರ್ಥಿಸಿ, ಆಶೀರ್ವಾದ ಮಾಡಿದ್ರು.

ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸುಮಲತಾ, ಅಂಬೇಡ್ಕರ್ ಜಯಂತಿ ಆಗಿರೋದ್ರಿಂದ ಒಳ್ಳೆಯ ವಿಚಾರ ಮಾತ್ರ ಮಾತನಾಡೋಣ ಎಂದರು. ನನಗೆ ಭಯದ ವಾತಾವರಣ ಇದೆ. ಆ ಕಾರಣಕ್ಕೆ ನಾನು ಚುನಾವಣಾ ಆಯೋಗಕ್ಕೆ ದೂರು ಕೊಟ್ಟಿರೋದು. ಮೈತ್ರಿ ಸರ್ಕಾರ ಅಧಿಕಾರವನ್ನ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಕಿಡಿಕಾರಿದ್ರು. ಜೆಡಿಎಸ್​ಗೆ ಮುಸ್ಲಿಮರ ಬೆಂಬಲವಿದೆ ಎಂಬ ವಿಚಾರದ ಕುರಿತು ಮಾತನಾಡಿ, ನನಗೂ ಸಹ ಮುಸ್ಲಿಮರ ಬೆಂಬಲ ಇದೆ ಎಂದು ಹೇಳಿದ್ರು.

ಇನ್ನು ಸುಮಲತಾ ಅಂಬರೀಶ್​ಗೆ  ರಾಕ್ ಲೈನ್ ವೆಂಕಟೇಶ್, ಜಿಲ್ಲೆಯ ದಲಿತ ಮುಖಂಡರು ಹಾಗೂ ವಿವಿಧ ಪಕ್ಷಗಳ ಮುಖಂಡರು ಸಾಥ್ ನೀಡಿದ್ರು.


firstNewsKannada  Instagram: firstnews.tv  Facebook: firstnews.tv  Twitter: firstnews.tv