ಮಂಡ್ಯ ಅಭಿವೃದ್ಧಿ ಬಗ್ಗೆ ಚೆರ್ಚೆಗೆ ನಾನು ಎನಿ ಟೈಮ್, ಎನಿ ವ್ಹೇರ್ ಸಿದ್ಧ: ಸುಮಲತಾ

ಮಂಡ್ಯ: ಮಂಡ್ಯ ಅಭಿವೃದ್ಧಿ ಬಗ್ಗೆ ಮಾತನಾಡಲ್ಲ‌, ಕೇವಲ ಆರೋಪ ಮಾಡುತ್ತಾರೆ ಎಂಬ ನಿಖಿಲ್ ಕುಮಾರಸ್ವಾಮಿ ಹೇಳಿಕೆಗೆ ಪಕ್ಷೇತ್ರ ಅಭ್ಯರ್ಥಿ ಸುಮಲತಾ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಮಾತನಾಡಿದ ಸುಮಲತಾ, Any where Any time ಅವರೊಂದಿಗೆ ಚರ್ಚೆಗೆ ಸಿದ್ಧ. ಮಂಡ್ಯ ಅಭಿವೃದ್ಧಿ ಬಗ್ಗೆ ಚರ್ಚಿಸಲು ನಾನು ಸಿದ್ಧಳಿದ್ದೇನೆ. ಜೆಡಿಎಸ್ ನಾಯಕರು ಟೀಕೆಗಳನ್ನ ಮಾಡುವಾಗ ಮಂಡ್ಯ ಅಭಿವೃದ್ಧಿ ನೆನಪಾಗಲಿಲ್ವ..? ಈಗ ಅವರು ಮಂಡ್ಯ ಅಭಿವೃದ್ಧಿ ಬಗ್ಗೆ ಮಾತನಾಡುತ್ತಾರೆ. ಜೆಡಿಎಸ್ ನಾಯಕರ ಹೇಳಿಕೆಗಳನ್ನ ಜನ ಕೇಳಿದ್ದಾರೆ. ಅವರಿಗೆ ಕೋಪ‌ ಇದೆ ಈಗ ಅವರು ಅಭಿವೃದ್ಧಿ ಬಗ್ಗೆ ಮಾತನಾಡಿದ್ರೆ ಜನ ನಂಬಲ್ಲ ಎಂದು ಹೇಳಿದ್ದಾರೆ.

ದರ್ಶನ್ ಅಭಿಮಾನಿಗಳು ಜೆಡಿಎಸ್ ಸೇರ್ಪಡೆ ವಿಚಾರವಾಗಿ ಮಾತನಾಡಿದ ಸುಮಲತಾ,ದರ್ಶನ್-ಯಶ್​​ಗೆ ಎಲ್ಲಾ ಪಕ್ಷದಲ್ಲೂ ಅಭಿಮಾನಿಗಳಿದ್ದಾರೆ. ದರ್ಶನ್ ಅಭಿಮಾನಿಗಳು ಈಗ ಜೆಡಿಎಸ್‌ ಸೇರಿದ್ದಾರೆಂದರೆ ಯೋಚನೆ ಮಾಡಬೇಕು ಅದರ ಹಿಂದೆ ಏನಿದೆ ಅಂತಾ ಎಂದರು.

ಮಂಡ್ಯ ಡಿಸಿ ಮಂಜುಶ್ರೀ ವರ್ಗಾವಣೆ ವಿಚಾರವಾಗಿ ಮಾತನಾಡಿದ ಸುಮಲತಾ, ಅನ್ಯಾಯದ ವಿರುದ್ಧ ಎತ್ತಿದ ಧ್ವನಿಗೆ ನ್ಯಾಯ ಸಿಕ್ಕಿದೆ. ಅಧಿಕಾರದಲ್ಲಿದ್ದಾಗ ಇವರು ಯಾರನ್ನೂ ವರ್ಗಾವಣೆ ಮಾಡಿಲ್ವ..? ಅಧಿಕಾರದಲ್ಲಿರುವ ಪಕ್ಷಗಳು ಅಧಿಕಾರಿಗಳನ್ನ ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಇರುತ್ತೆ. ಹಾಗಾಗಿ ಚುನಾವಣಾ ಆಯೋಗ ಮಂಡ್ಯ ಡಿಸಿ ಅವರನ್ನ ವರ್ಗಾಯಿಸಿದ್ದಾರೆ. ಡಿಸಿ ವರ್ಗಾವಣೆಯಿಂದ ಇವರಿಗಾದ ನಷ್ಟ ಏನು? ಯಾಕೆ ಚುನಾವಣಾ ಆಯೋಗದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಸುಮಲತಾ ಪ್ರಶ್ನಿಸಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv