‘ಹಣ ಇರುವ ಕಡೆ ಐಟಿ‌ ದಾಳಿ ಆಗುತ್ತೆ, ಹಣ ಎಲ್ಲಿದೆ ಅಂತ ಎಲ್ರಿಗೂ ಗೊತ್ತು’

ಮಂಡ್ಯ:  ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್​ ವಕೀಲರ ಸಂಘದ ಕಚೇರಿಗೆ ಭೇಟಿ ನೀಡಿ, ಚುನಾವಣೆಯಲ್ಲಿ ತಮ್ಮನ್ನ ಬೆಂಬಲಿಸುವಂತೆ  ಕೋರಿದ್ರು. ಈ ವೇಳೆ ಸುಮಲತಾಗೆ ಮೈಸೂರು ಪೇಟಾ ತೊಡಿಸಿ, ವಕೀಲರು ಬೆಂಬಲ ಘೋಷಿಸಿದ್ರು.

ಈ ವೇಳೆ ಸುಮಲತಾ ಅಂಬರೀಶ್​ ಮಾತನಾಡಿ, ಹಣ ಇರುವ ಕಡೆ ಐಟಿ‌ ದಾಳಿ ಆಗುತ್ತೆ. ಹಣ ಎಲ್ಲಿದೆ ಅಂತ ಎಲ್ರಿಗೂ ಗೊತ್ತು. ಯಾಕೆ ಐಟಿ ದಾಳಿ ಆಗ್ತಿದೆ ಅಂತಲೂ ಜನಕ್ಕೆ ಗೊತ್ತು. ಈಗಾಗಲೇ ಅವರದ್ದೇ ಎರಡು  ಆಡಿಯೋ  ಬಹಿರಂಗ ಆಗಿದೆ. ಜನರಿಗೆ ಇದರ ಬಗ್ಗೆ ಎಲ್ಲ ಗೊತ್ತಿದೆ. ಐಟಿ ದಾಳಿಗೂ ನನಗೂ ಸಂಬಂಧವಿಲ್ಲ. ಐಟಿ ದಾಳಿ ಬಗ್ಗೆ ಪದೇ ಪದೇ ನನಗ್ಯಾಕೆ ಕೇಳ್ತೀರೋ ಗೊತ್ತಿಲ್ಲ ಎಂದು ಹೇಳಿದ್ರು.

ಮುಸ್ಲಿಂ‌ ಮತ ಗಳಿಕೆಗಾಗಿ ಸುಮಲತಾ ಬಿಜೆಪಿ ಅಭ್ಯರ್ಥಿ ಅಲ್ಲ‌ ಅಂತಾರೆ. ಆದ್ರೆ ಹೋಟೆಲ್‌ನಲ್ಲಿ ಕುಳಿತು ಬಿಜೆಪಿ ನಾಯಕರ ಜೊತೆ ಮಾತುಕತೆ ನಡೆಸ್ತಾರೆ ಎಂದು ಸಚಿವ ಸಿ.ಎಸ್.ಪುಟ್ಟರಾಜು ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಅವರು ಏನ್ ಬೇಕಾದ್ರೂ ಹೇಳ್ತಾರೆ, ಏನ್ ಬೇಕಾದ್ರೂ ಸೃಷ್ಟಿಸ್ತಾರೆ, ಏನ್ ಬೇಕಾದ್ರೂ  ಮಾಡಿಕೊಳ್ಲಿ,  ಚಿಂತೆ ಇಲ್ಲ. ಜನ ಮೋಸ ಹೋಗಲ್ಲ. ಹೀನಾಯ ರಾಜಕಾರಣಕ್ಕೆ ಇಳಿದಿದ್ದಾರೆ ಅವರು ಅಂತ ಜನಕ್ಕೆ ಗೊತ್ತಾಗಿದೆ ಎಂದು ಸಿ.ಎಸ್​ ಪುಟ್ಟರಾಜು ಹೇಳಿಕೆಗೆ ತಿರುಗೇಟು ನೀಡಿದ್ರು.

ಇವತ್ತು ಸಮಾವೇಶ ಇಟ್ಕೊಂಡಿದೀವಿ. ಕಳೆದ ನಾಲ್ಕು ವಾರಗಳ ಅನಿಸಿಕೆಯನ್ನು ಜನರ ಜೊತೆ ಹಂಚಿಕೊಳ್ತೇವೆ. ಈ ಸಮಾವೇಶ ನಮ್ಮ ಶಕ್ತಿ‌ ಪ್ರದರ್ಶನ ಅಲ್ಲ ಎಂದು ಸುಮಲತಾ ಅಂಬರೀಶ್​ ಸ್ಪಷ್ಟನೆ ನೀಡಿದ್ರು.

ಇದನ್ನು ಓದಿ: ಮುಸ್ಲಿಂ‌ ಮತ ಗಳಿಕೆಗಾಗಿ ಸುಮಲತಾ ಬಿಜೆಪಿ ಅಭ್ಯರ್ಥಿ ಅಲ್ಲ‌ ಅಂತಾರೆ -ಸಚಿವ ಪುಟ್ಟರಾಜು


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv