ಜೋಡೆತ್ತುಗಳ ಜೊತೆ ಸುಮಲತಾ ರೋಡ್​ ಶೋ.. ಹರಿದು ಬಂದ ಜನಸಾಗರ..

ಮಂಡ್ಯ: ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ಕೊನೆಯ ದಿನವಾದ್ದರಿಂದ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಮಂಡ್ಯದಲ್ಲಿ ಇಂದು ಬೃಹತ್ ರೋಡ್​ ಶೋ ನಡೆಸುತ್ತಿದ್ದಾರೆ.

ರಾರಾಜಿಸಿದ ಚಲುವರಾಯಸ್ವಾಮಿ ಬ್ಯಾನರ್
ರೋಡ್​ ಶೋನಲ್ಲಿ ದರ್ಶನ್, ಯಶ್, ಸುನೀತಾ ಪುಟ್ಟಣ್ಣಯ್ಯ, ದರ್ಶನ್ ಪುಟ್ಟಣ್ಣಯ್ಯ, ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಕಾಳಿಕಾಂಬ ದೇವಸ್ಥಾನದಿಂದ ರೋಡ್​ಶೋ ಮೂಲಕ ಸಿಲ್ವರ್ ಜುಬ್ಲಿ ಮೈದಾನದಲ್ಲಿ ಪ್ರಚಾರ ಸಭೆ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ವಾಭಿಮಾನಿ ಸಮ್ಮಿಲನಕ್ಕೆ  ಜನ ಸಾಗರವೇ ಹರಿದು ಬರುತ್ತಿದೆ. ಱಲಿಯಲ್ಲಿ ಕಾಂಗ್ರೆಸ್​ ಮುಖಂಡ  ಚಲುವರಾಯಸ್ವಾಮಿ ಭಾವಚಿತ್ರ ರಾರಾಜಿಸುತ್ತಿದ್ದು, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮುಖಂಡರು, ಕಾರ್ಯಕರ್ತರು ಭಾಗಿಯಾಗಿದ್ದಾರೆ.

 


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv