ನಿಖಿಲ್ ಗೆಲುವಿಗಾಗಿ ₹150 ಕೋಟಿ; ಇಂಥ ಚುನಾವಣೆ ವಿಶ್ವದಲ್ಲೇ ನೋಡಿರಲಿಲ್ಲ: ಸುಮಲತಾ

ಮಂಡ್ಯ: ಒಂದು ಬೂತ್​​ಗೆ 5 ಲಕ್ಷ ಅಂದ್ರೆ ವಿಶ್ವದಲ್ಲೇ ಈ ರೀತಿಯ ಚುನಾವಣೆ ನೋಡಿರಲಿಲ್ಲ ಅಂತಾ ಸುಮಲತಾ ಅಂಬರೀಶ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆಲ್ಲೋದಕ್ಕೆ 150 ಕೋಟಿ ವೆಚ್ಚ ಮಾಡಲಾಗುತ್ತಿದೆ ಎನ್ನಲಾಗಿರುವ ಆಡಿಯೋ ವೈರಲ್ ಬಗ್ಗೆ ಮಳವಳ್ಳಿಯಲ್ಲಿ ಪ್ರತಿಕ್ರಿಯಿಸಿರುವ ಸುಮಲತಾ ಅಂಬರೀಶ್, ಅವರಿಗೆ ಹಣ ಎಲ್ಲಿಂದ ಬರ್ತಿದೆ? ಒಂದು ಬೂತ್​​ಗೆ ಐದು ಲಕ್ಷ ಅಂದ್ರೆ ವಿಶ್ವದಲ್ಲಿ ಈ ರೀತಿಯ ಚುನಾವಣೆ ನೋಡಿರಲಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯ ಕಗ್ಗೊಲೆ ನಡೆಯುತ್ತಿದೆ. ಕೇಳೋದಕ್ಕೆ ತುಂಬಾ ಬೇಜಾರಾಗ್ತಿದೆ. ಈ ರೀತಿಯ ವರ್ತನೆ ತುಂಬಾ ಬೇಜಾರು. ಈ ರೀತಿ ನಡೆದುಕೊಳ್ತಾರೆ ಅಂತಾ ನಮಗೆ ಮೊದಲೇ ಗೊತ್ತಿತ್ತು. ಅವರು ಯಾವ ರೀತಿ ಚುನಾವಣೆ ನಡೆಸುತ್ತಾರೆ ಅನ್ನೋದು ಈಗ ಬಯಲಾಗಿದೆ ಅಂತಾ ಹೇಳಿದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv