ಱಲಿಯಲ್ಲಿ ಕಲ್ಲೇಟು, ಅವರದೇ ಇಂಟಲಿಜೆನ್ಸ್ ಆಫೀಸರ್ಸ್​​​ ಉತ್ತರಿಸಲಿ: ಸುಮಲತಾ ತಿರುಗೇಟು

ಮಂಡ್ಯ: ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಮಲತಾ ತಮ್ಮ ಱಲಿಯಲ್ಲಿ ತಾವೇ ಕಲ್ಲು ಹೊಡೆಸಿ, ಜೆಡಿಎಸ್​​ನವ್ರು ಮಾಡಿದ್ದಾರೆಂದು ಆರೋಪ ಮಾಡ್ತಾರೆ ಎಂದು ಸಿಎಂ ಕುಮಾರಸ್ವಾಮಿ ಇಂದು ಬೆಳಗ್ಗೆ ಆಪಾದಿಸಿದ್ದರು. ಇದಕ್ಕೆ ತಿರುಗೇಟು ನೀಡಿರುವ ಸುಮಲತಾ, ಕಲ್ಲು ತೂರಾಟ, ದಬ್ಬಾಳಿಕೆ, ಅಹಂಕಾರದ ಮಾತುಗಳು ಅವರ ಕಡೆಯಿಂದಲೇ ಬರ್ತಿವೆ. ನಮ್ಮ ಕಡೆಯಿಂದ ಅಂತದ್ದು ಯಾವ್ದೂ ಆಗ್ತಿಲ್ಲ. ಆ ರೀತಿ ಮಾಡ್ತಿದ್ರೆ ಅದು ಅವರಿಗೇ ಗೊತ್ತಾಗಬೇಕು. ಇಂಟಲಿಜೆನ್ಸ್ ಆಫೀಸರ್ ಗಳನ್ನ ಅವರೇ ಬಿಟ್ಟು ಕೆಲಸ‌ ಮಾಡಿಸ್ತಿದ್ದಾರೆ ಎಂದು ಶ್ರೀರಂಗಪಟ್ಟಣದ ಗುಂಬಸ್ ನಲ್ಲಿ ಸುಮಲತಾ ತೀಕ್ಷಣವಾಗಿ ಪ್ರತಿಕ್ರಿಯಿಸಿದ್ದಾರೆ.

ಸಿಎಂ ಕುಮಾರಸ್ವಾಮಿ ಆರೋಪಕ್ಕೆ ಉತ್ತರ ಕೊಡಬೇಕಾ? ಅಂತಾನೂ ಅನ್ನಿಸುತ್ತಿದೆ. ಹೋದ ಕಡೆಯಲ್ಲೆಲ್ಲಾ ನೋಡುತ್ತಿದ್ದೀರಾ. ಜನ ಪ್ರೀತಿಯಿಂದ ನನ್ನನ್ನು ಸ್ವಾಗತ ಮಾಡಿಕೊಳ್ಳುತ್ತಿದ್ದಾರೆ ಎಂದು ಸುಮಲತಾ ಹೇಳಿದರು.

ಮಾಧ್ಯಮಗಳಿಗೆ ಸುಮಲತಾ ಪ್ರಶ್ನೆ:
ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ಆದ್ರೆ ನಾನು ಜವಾಬ್ದಾರಿ ಅಲ್ಲ ಅಂತಾ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ನೀವ್ಯಾಕೆ (ಮಾಧ್ಯಮದವರು) ಏನೂ ಕ್ರಮ ತಗೋತ್ತಿಲ್ಲ. ಬೇರೆ ದೇಶದಲ್ಲಿ ಈ ವಿಚಾರ ಸಾಕಷ್ಟು ಗಂಭೀರ ಆಗುತ್ತಿತ್ತು. ಸಿಎಂ ಸ್ಥಾನದಲ್ಲಿ ಇದ್ದು ಹೆದರಿಕೆ, ಬೆದರಿಕೆ ಹಾಕ್ತಾರೆ. ಅದನ್ನ ನೀವು ಸೀರಿಯಸ್ ಆಗಿ ತಗೊಳ್ಳಿ. ಪ್ರೆಸ್ ಗೇ ಹೆದರಿಕೆ ‌ಬೆದರಿಕೆ ಹಾಕಿರುವಾಗ ಇನ್ನು ನನಗೆ ಎಲ್ಲಿದೆ‌ ರಕ್ಷಣೆ? ಎಂದು ಸುಮಲತಾ ಪ್ರಶ್ನಿಸಿದರು.

ಅವ್ರು ರಾಜ್ಯದ ಸಿಎಂ ಅನ್ನೋದನ್ನೇ ಮರೆತಿದ್ದಾರೆ ಅನ್ಸುತ್ತೆ. ಮೊದಲಿಗೆ ನಮ್ಮ ಬೆಂಬಲಿಗರಿಗೆ ಬೆದರಿಕೆ ಹಾಕಿದ್ರು. ಈಗ ಮಾಧ್ಯಮಗಳಿಗೆ ಬೆದರಿಕೆ ಹಾಕ್ತಿದ್ದಾರೆ.
ದಯವಿಟ್ಟು ಇದನ್ನ ಕಡೆಗಣಿಸಬೇಡಿ. ಇದು ಸಾಮಾನ್ಯ ವಿಷಯ ಅಲ್ಲ. ಮಾಧ್ಯಮಗಳಿಗೆ ಈ ರೀತಿ ಬೆದರಿಕೆ ಹಾಕೋರಿಂದ ನನ್ನಂಥ ಸಾಮಾನ್ಯರಿಗೆ ಸೇಫ್ಟಿ, ಸೆಕ್ಯುರಿಟಿ ಇದೆಯಾ? ಅಧಿಕಾರ ದುರ್ಬಳಕೆ ಮಾಡಿಕೊಂಡು ನಮ್ಮಂಥವರಿಗೆ ಏನೆಲ್ಲಾ ಬೆದರಿಕೆ ಹಾಕಿದ್ದಾರೆ ಅನ್ನೋದು ನಿಮಗೆ ಅರ್ಥ ಆಗಿರಬೇಕು ಈವಾಗ ಎಂದು ಸಿಎಂ ಕುಮಾರಸ್ವಾಮಿ ವಿರುದ್ಧ ಸುಮಲತಾ ಕಿಡಿಕಾರಿದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv