ಅಂದು ಟಿಕೆಟ್ ಕೊಟ್ಟಿದ್ದರೆ, ಇಂದು ಮಂಡ್ಯ ಕಾಂಗ್ರೆಸ್ ಪಾಲಾಗ್ತಿತ್ತು -ಸುಮಲತಾ

ಬೆಂಗಳೂರು: ಜೆಡಿಎಸ್​ ಭದ್ರ ಕೋಟೆ ಮಂಡ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್​ ತಮ್ಮ ಗೆಲುವಿನ ಖುಷಿಯನ್ನು ಹಂಚಿಕೊಂಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಇದೇ ಮೊದಲ ಬಾರಿಗೆ ಕಾಂಗ್ರೆಸ್‌, ಬಿಜೆಪಿ ಕಾರ್ಯಕರ್ತರು ಒಂದಾಗಿ ನನಗಾಗಿ ಕೆಲಸ ಮಾಡಿದ್ದಾರೆ. ಜೊತೆಗೆ ಮಂಡ್ಯದ ಜನ ಸ್ವಾಭಿಮಾನದಿಂದಲೇ ಉತ್ತರಿಸಿದ್ದಾರೆ. ಎಲ್ಲಾ ಟೀಕೆಗಳಿಗಳಿಗೂ ಇಂದು ಉತ್ತರ ಸಿಗುವುದರ ಜೊತೆಗೆ ಮಂಡ್ಯದ ಜನ್ರು ಇತಿಹಾಸ ಸೃಷ್ಟಿಸಿದ್ದಾರೆ. ಒಂದು ವೇಳೆ, ಅಂದು ಕಾಂಗ್ರೆಸ್ ಟಿಕೆಟ್ ಕೊಟ್ಟಿದ್ರೆ ಇಂದು ಮಂಡ್ಯ ಅವ್ರ ಪಾಲಾಗ್ತಿತ್ತು ಅಂತಾ ಹೇಳಿದರು.

ಇದೇ  ವೇಳೆ, ಮೇ 29 ರಂದು ಅಂಬರೀಶ್ ಹಟ್ಟು ಹಬ್ಬ. ಹೀಗಾಗಿ ಮಂಡ್ಯ ಜನತೆಗೆ ಧನ್ಯವಾದ ಅರ್ಪಿಸಲು, ಮೇ 29 ರಂದು ಮಂಡ್ಯದಲ್ಲಿ ಸ್ವಾಭಿಮಾನಿ ವಿಜಯೋತ್ಸವವನ್ನ ಆಚರಿಸುತ್ತೇವೆ. ಈ ವಿಜಯೋತ್ಸವದಲ್ಲಿ ಯಶ್, ದರ್ಶನ್ ಎಲ್ರೂ ಕೂಡ ಭಾಗಿ ಆಗ್ತಾರೆ. ಮೊದಲು ಸಮಾಧಿಗೆ ಪೂಜೆ ಮಾಡಿ, ನಂತ್ರ ಮಂಡ್ಯದಲ್ಲಿ ವಿಜಯೋತ್ಸವ ಆಚರಿಸುತ್ತೇವೆ ಅಂತಾ ಹೇಳಿದರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv