ಅಂಬಿಗಿಂತ ವಿಷ್ಣು ಸ್ಮಾರಕ ಮೊದಲು ಕಂಪ್ಲೀಟ್ ಆಗ್ಲಿ!

ಇಂದು ದಿವಗಂತ ರೆಬಲ್ ಸ್ಟಾರ್​ ಅಂಬರೀಶ್ ಅವರ ಐದನೇ ತಿಂಗಳ ಪುಣ್ಯತಿಥಿ. ನೆಚ್ಚಿನ ನಟನನ್ನು ಕಳೆದುಕೊಂಡು ಇಂದಿಗೆ 5 ತಿಂಗಳು ಕಳೆದಿವೆ. ಇದೇ ದಿನ ವರನಟ ಡಾ. ರಾಜ್​ಕುಮಾರ್ ಅವರ 91 ನೇ ವರ್ಷದ ಹುಟ್ಟುಹಬ್ಬ ಕೂಡ ಹೌದು. ಅಂಬಿ ಹಾಗೂ ರಾಜ್ ಸಮಾಧಿಗೆ ನಮಿಸಿ ಮಾತಾನಾಡಿದ ಸುಮಲತಾ, ಐದು ತಿಂಗಳು ಕಳೆದರೂ ಅಂಬಿಯನ್ನ ಮರೆಯೋಕೆ ಸಾಧ್ಯವಿಲ್ಲ. ಅವರ ಪ್ರೀತಿ, ಮಾತು, ನೆನಪು ಸದಾ ಕಾಡುತ್ತಿವೆ. ಅಣ್ಣಾವ್ರ ಜೊತೆಯಲ್ಲಿ ಅಂಬಿ ಯಾವಾಗಲೂ ಜೋಕ್ ಮಾಡ್ತಾ ಲವಲವಿಕೆಯಿಂದ ಇರ್ತಿದ್ರು ಅಂತಾ ಹೇಳಿದ್ರು.

ಅಂಬಿ ಸ್ಮಾರಕಕ್ಕಿಂತ, ಅಣ್ಣಾವ್ರು, ವಿಷ್ಣು ಸ್ಮಾರಕ ಮೊದಲು!
ಇನ್ನು ಒಂದೇ ದಿನ ಅಣ್ಣಾವ್ರು ಹಾಗೂ ಅಂಬಿ ಕಾರ್ಯಕ್ರಮ ಬಂದಿದೆ. ಅಂಬಿ ಇಲ್ಲದಿದ್ರೂ ಜನರ ಅಭಿಮಾನ, ಪ್ರೀತಿ ಒಂಚೂರು ಕುಗಿಲ್ಲ ಅಂದ್ರು. ಅಲ್ಲದೇ ರಾಜ್ ಹಾಗೂ ಅಂಬಿ ತುಂಬಾನೇ ಒಡನಾಡಿಗಳು ಯಾವಾಗ್ಲೂ ಅಂಬಿ ನನ್ನ ಜೊತೆಯಲ್ಲೇ ಇದ್ರೆ ಬೇಜಾರ್ ಆಗೋದಿಲ್ಲ ಅಂತಾ ಅಣ್ಣಾವ್ರು ಹೇಳ್ತಿದ್ರು ಅಂತಾ ಹಳೆಯ ನೆನಪನ್ನು ಬಿಚ್ಚಿಟ್ರು. ಇನ್ನು ಚುನಾವಣಾ ಸ್ಪರ್ಧೆಯ ವಿಚಾರ ಕೆಲವೊಂದು ಘಟನೆಯಿಂದಾಗಿ ಒಂದಷ್ಟು ತಿಳುವಳಿಕೆ ಬಂದಿದೆ ಅಂದ್ರು. ಜೊತೆಗೆ ಸ್ಮಾರಕದ ವಿಚಾರದಲ್ಲಿ ಮೊದಲು ಡಾ. ರಾಜ್​ಕುಮಾರ್, ವಿಷ್ಣು ಸ್ಮಾರಕ ಕಂಪ್ಲೀಟ್ ಆದ ಬಳಿಕ ಅಂಬಿ ಸ್ಮಾರಕವಾಗಲಿ ಮೂವರು ಕನ್ನಡ ಚಿತ್ರರಂಗ ಕಂಡ ದೊಡ್ಡ ಲಜೆಂಡ್​ಗಳು ಅಂತಾ ಹೇಳಿದ್ರು. ಇನ್ನು ಮಂಡ್ಯ ಚುನಾವಣಾ ಗೆಲುವಿಗೆ ಸಂಬಂಧಿಸಿದಂತೆ ಬೆಟ್ಟಿಂಗ್ ನಡಿಯುತ್ತಿರೋದು ವಿಷಾದನೀಯ. ಖಂಡಿತವಾಗಿಯೂ ಅದನ್ನ ನಾನು ವಿರೋಧಿಸುತ್ತೇನೆ. ಮೇ.23 ರ ಬಳಿಕ ಎಲ್ಲವೂ ಗೊತ್ತಾಗಲಿದೆ ಅಂತಾ ಅಭಿಮಾನಿಗಳಲ್ಲಿ ಮನವಿ ಮಾಡಿದ್ರು.