ಇದು ತುಂಬಾ, ತುಂಬಾನೇ ತಪ್ಪು:ಶ್ರೀಲಂಕಾ ದಾಳಿ ಖಂಡಿಸಿದ ಸುಮಲತಾ

ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ದಾಳಿಗೆ ಸುಮಲತಾ ಅಂಬರೀಶ್ ಅತೀವ ದುಃಖ ವ್ಯಕ್ತಪಡಿಸಿದ್ದಾರೆ. ಟ್ವಿಟರ್ ಮೂಲಕ ಕಂಬನಿ ಮಿಡಿದಿರೋ ಸುಮಲತಾ, ಇದು ತುಂಬಾನೇ ತಪ್ಪು, ಖಂಡನಾರ್ಹ, ಅದೆಂಥಾ ವಿಕೃತವಾದ ಮನಸ್ಸುಗಳು. ಹೀಗೆ ಹೃದಯವಿದ್ರಾವಕವಾಗಿ ನಡೆದುಕೊಂಡಿರೋದು. ದಾಳಿಯಲ್ಲಿ ತುತ್ತಾದ ಅಮಾಯಕರ ಜೀವಗಳ ಕುಟುಂಬದವರಿಗೆ ಸಾಂತ್ವನ ಹೇಳೋಕೆ ಯಾವ ಪದಗಳೂ ಇಲ್ಲ’ ಎಂದು ನೊಂದು ಬರೆದಿದ್ದಾರೆ.

ನಿನ್ನೆ ಶ್ರೀಲಂಕಾದಲ್ಲಿ ಉಗ್ರರು ನಡೆಸಿದ ನರಮೇಧದಿಂದ ಸೂತಕದ ಛಾಯೆ ಮಡುಗಟ್ಟಿದೆ. ಚರ್ಚ್​, ಹೋಟೆಲ್​ಗಳ ಮೇಲೆ ಅಟ್ಟಹಾಸ ಮೆರೆದ ಉಗ್ರರು 250ಕ್ಕೂ ಹೆಚ್ಚು ಅಮಾಯಕ ಜೀವಗಳನ್ನ ಬಲಿಪಡೆದಿದ್ದಾರೆ. ಸುಮಾರು 400 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಮುಂದುವರೆದಿದೆ.