ಯಾರು ಅಭಿವೃದ್ಧಿ ಮಾಡೋದಿಲ್ವೋ ಅವರು ವೋಟ್​ ಕೊಂಡುಕೊಳ್ಳುತ್ತಾರೆ-ಸುಮಲತಾ ಅಂಬರೀಶ್

ಮಂಡ್ಯ: ಚುನಾವಣೆ ಸಮಯದಲ್ಲಿ ನಾವೆಲ್ಲಿ ಸೋಲುತ್ತೇವೆ ಎಂಬ ಭಯದಿಂದ ಹಣವನ್ನ ಮುಂದಿಡುತ್ತಾರೆ. ಕೊನೆಯ ಮೂರು ದಿವಸ ನಾವೇನು ಮಾಡ್ತೀವಿ ಅನ್ನೋದನ್ನ ನೋಡ್ಕೋಳಿ ಅಂತಾರೆ. ಇದೇನು ಹೊಸದಲ್ಲ. ಯಾರೂ ಅಭಿವೃದ್ಧಿ ಮಾಡೋದಿಲ್ವೋ ಅವರು ವೋಟ್​ ಕೊಂಡುಕೊಳ್ಳುತ್ತಾರೆ. ಅವರಿಗೆ ಬೇರೆ ದಾರಿ ಇಲ್ಲ. ಆದ್ರೆ ಬೇರೆ ದಾರಿ ನಿಮಗಿದೆ ಎಂದು ಸುಮಲತಾ ಅಂಬರೀಶ್​ ಹೇಳಿದ್ದಾರೆ.

ಮಂಡ್ಯದ ತೆಂಡೇಕೆರೆಯಲ್ಲಿ ಮಾತನಾಡಿದ ಅವರು, ಅವರು ಕೊಡೋ ₹ 500, ₹1000 ದಿಂದ ಒಂದು ವಾರ ಬದುಕಬಹುದು ಅಷ್ಟೇ. ಹಣ ಹೋದ್ರೆ ಬದುಕಬಹುದು, ಸ್ವಾಭಿಮಾನ ಹೋದ್ರೆ ವಾಪಾಸ್​ ಪಡೆಯಲು ಸಾಧ್ಯವಿಲ್ಲ. ಇದು ಮಂಡ್ಯದ ವಿಷಯ.. ಮಂಡ್ಯದ ಅಭಿವೃದ್ದಿ ವಿಷಯ, ನಿಮಗೆ ನೀಡಿದ ಹಣವನ್ನ ಅವರು ಮತ್ತೆ ಸಂಪಾದನೆ ಮಾಡ್ಕೋತಾರೆ. ಎಂದು ಹೇಳಿದ್ರು.

ಇದೇ ವೇಳೆ ಈ ಬಾರಿಯ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ನಾನು ಒಬ್ಬ ಹೆಣ್ಣು ಮಗಳಾಗಿ  ಎಲ್ಲವನ್ನ,  ಎಲ್ಲರನ್ನ ಎದುರಿಸಿ ನಿಂತಿದ್ದೀನಿ ಅಂದ್ರೆ ಸುಲಭವಲ್ಲ. ಏನೇನೋ ಮಾತುಗಳು, ಏನೇನು ಅವಮಾನ ಮಾಡಿದ್ದಾರೆ ಅಂತಾ ನಿಮಗೆ ಗೊತ್ತು. ಇದ್ಯಾವುದಕ್ಕೂ ನಾನು ಉತ್ತರ ನೀಡಿಲ್ಲ. ಆ ಉತ್ತರ  ನಿಮ್ಮಿಂದ ನಿರೀಕ್ಷೆ ಮಾಡುತ್ತೇನೆ.  ಯಾಕಂದ್ರೆ ನನಗೆ ಆಗಿರುವ ಅವಮಾನ ಎಲ್ಲಾ ಹೆಣ್ಣುಮಕ್ಕಗೆ ಆಗಿರುವ ಅವಮಾನ. ಯಾಕಂದ್ರೆ ಮಹಿಳೆಯರ ಬಗ್ಗೆ ಗೌರವ ಇರುವವರೂ ಯಾರೂ ಈ ರೀತಿ ಮಾತಾಡಲ್ಲ. ನನ್ನನ್ನ ನಿಮ್ಮ ಪ್ರತಿನಿಧಿಯಾಗಿ ಆರಿಸಿಕೊಂಡ್ರೆ, ನಿಮ್ಮ ಕಷ್ಷ ಸುಖದ ಅರಿವು ನನಗಿದೆ. ಒಬ್ಬ ಮಗಳಾಗಿ, ತಾಯಿಯಾಗಿ, ಹೆಂಡ್ತಿಯಾಗಿ, ಇದರ ಅರಿವಿದೆ. ಇನ್ನ ಸಮಸ್ಯೆಗೆ ಹೋರಾಡೋಕೆ ಸದಾ ಸಿದ್ದವಾಗಿದ್ದೇನೆ ಎಂದು ಹೇಳಿದ್ರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv